ಸುಳ್ಯ:ಮಳೆ ಹಾಗು ಬೀಸಿದ ಗಾಳಿಯಿಂದ ಸುಳ್ಯ ನಗರ ಸೇರಿ ತಾಲೂಕಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಇದರಿಂದ ಸತತ ಎರಡನೇ ದಿನವೂ ಸುಳ್ಯ ಕತ್ತಲಲ್ಲಿ ಕಳೆಯುವಂತಾಗಿದೆ. ಸುಳ್ಯ ನಗರ ಸೇರಿದಂತೆ ಎಲ್ಲೆಡೆ ಕತ್ತಲು ಆವರಿಸಿದೆ. ಸಂಜೆ ವೇಳೆಗೆ ಗುಡಗು, ಸಿಡಿಲು, ಗಾಳಿ ಸಹೀತ ವಿವಿಧ ಕಡೆ
ಮಳೆ ಸುರಿಸಿತ್ತು. ಆ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಮಾಡಾವು ಸುಳ್ಯ ಲೈನ್ನಲ್ಲಿ ಮಡ್ಲ ಎಂಬಲ್ಲಿ ಮರ ಬಿದ್ದು ಮೈನ್ ಲೈನ್ ಕಡಿತವಾಗಿದೆ.ವಿದ್ಯುತ್ ಕಂಬ, ವಿದ್ಯುತ್ ಲೈನ್ಗಳಿಗೆ ಹಾನಿ ಆಗಿದೆ. ಇದರಿಂದ ಸುಳ್ಯಕ್ಕೆ ವಿದ್ಯುತ್ ಸರಬರಾಜು ಸಂಪರ್ಕ ಕಡಿತವಾಗಿದೆ. ಇದನ್ನು ಸರಿ ಪಡಿಸುವ ಕಾರ್ಯ ನಡೆಯುತಿದೆ. ತಡ ರಾತ್ರಿ ವಿದ್ಯುತ್ ಸಂಪರ್ಕ ಸರಿಯಾಗುವ ಸಾಧ್ಯತೆ ಇದೆ. ಮೈನ್ ಲೈನ್ ಸಂಪರ್ಕ ಸರಿ ಆದರೆ ಎಲ್ಲಾ ಕಡೆ ಚಾರ್ಜ್ ಆಗಲಿದೆ ಎಂದು ಸುಳ್ಯದ ಮೆಸ್ಕಾಂ ಉಪ ವಿಭಾಗದ ಇಂಜಿನಿಯರ್ಗಳು ಮಾಹಿತಿ ನೀಡಿದ್ದಾರೆ. ಮುಖ್ಯ ಲೈನ್ ಮಾತ್ರವಲ್ಲದೆ ರಾಷ್ಟೀಯ ಹೆದ್ದಾರಿಯಲ್ಲಿ ಪರಿವಾರಕಾನ ಎಂಬಲ್ಲಿ ಮರ ಬಿದ್ದು 11 ಕೆವಿ ಲೈನ್ನ ಕಂಬಗಳಿಗೆ ಹಾನಿಯಾಗಿತ್ತು.