ಸುಳ್ಯ: ಜ.2ರಂದು ಮಂಗಳವಾರ ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33 ಕೆ.ವಿ. ಮಾಡಾವು ಬೆಳ್ಳಾರೆ 33 ಕೆವಿ ಗುತ್ತಿಗಾರು ವಿದ್ಯುತ್ ಮಾರ್ಗದಲ್ಲಿ ಮತ್ತು 11ಕೆವಿ ಫೀಡರುಗಳಲ್ಲಿ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ 110/33 ಮಾಡಾವು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 33 ಕೆವಿ ಮಾಡಾವು-ಬೆಳ್ಳಾರೆ ಹಾಗೂ
33/11 ಕೆವಿ ಗುತ್ತಿಗಾರು ವಿತರಣಾ ಕೇಂದ್ರದಿಂದ ಹೊರಡುವ 33 ಕೆವಿ ಗುತ್ತಿಗಾರು ಮತ್ತು 33/11 ಬೆಳ್ಳಾರೆ ವಿತರಣಾ ಕೇಂದ್ರದಿಂದ ಹೊರಡುವ 11 ಕೆವಿ ಬೆಳ್ಳಾರೆ-1, ಬೆಳ್ಳಾರೆ 2, ನೆಟ್ಟಾರು, ಕಳಂಜ, ಮುರುಳ್ಯ, ಪೆರ್ಲಂಪಾಡಿ, ಚೊಕ್ಕಾಡಿ ಫೀಡರುಗಳಲ್ಲಿ ಬೆಳಿಗ್ಗೆ 10ರಿಂದ ಸಾಯಂಕಾಲ 6 ಗಂಟೆಯ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಮೆಸ್ಕಾಂ ಸುಳ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.