ವಾಶಿಮ್ (ಮಹಾರಾಷ್ಟ್ರ): ಸುಮಾರು 9.4 ಕೋಟಿ ರೈತರ ಖಾತೆಗಳಿಗೆ ‘ಪಿಎಂ–ಕಿಸಾನ್ ಸಮ್ಮಾನ್ ನಿಧಿ’ಯ 18ನೇ ಕಂತಿನ 20,000 ಕೋಟಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಾಶಿಮ್ನಲ್ಲಿ
ಬಿಡುಗಡೆ ಮಾಡಿದರು. ಮಹಾರಾಷ್ಟ್ರ ರೈತರಿಗಾಗಿ
ನೀಡುವ ‘ನಮೋ ಶೇಟ್ಕರಿ ಮಹಾಸನ್ಮಾನ್ ನಿಧಿ ಯೋಜನೆ’ಯ 5ನೇ ಕಂತಿನ 2,000 ಕೋಟಿಯನ್ನೂ ವಿತರಿಸಿದರು. ಮಹಾರಾಷ್ಟ್ರಕ್ಕೆ ಒಂದು ದಿನದ ಪ್ರವಾಸ ಕೈಗೊಂಡಿರುವ ಮೋದಿ ಅವರು ಸಮಾರಂಭದಲ್ಲಿ ಕೃಷಿ ಹಾಗೂ ಪಶು ಸಂಗೋಪನೆಗೆ ಸಂಬಂಧಿಸಿದ ಸುಮಾರು 23,000 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.