ನವದೆಹಲಿ: ‘ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿತಗೊಳಿಸುವ ಯಾವುದೇ ಪ್ರಸ್ತಾವವು ಕೇಂದ್ರ ಸರ್ಕಾರದ ಮುಂದಿಲ್ಲ’ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಚ್ಚಾ ತೈಲ ದರಕ್ಕೆ
ಸಂಬಂಧಿಸಿದಂತೆ ನಾವು ಪ್ರಕ್ಷುಬ್ಧ ಎದುರಿಸುತ್ತಿದ್ದೇವೆ. ಹಾಗಾಗಿ, ಇಂಧನ ಬೆಲೆ ಇಳಿಕೆಗೆ ಸಂಬಂಧಿಸಿದಂತೆ ತೈಲ ಮಾರಾಟ ಕಂಪನಿಗಳ ಜೊತೆಗೆ ಸರ್ಕಾರ ಯಾವುದೇ ಚರ್ಚೆ ನಡೆಸಿಲ್ಲ’ ಎಂದು ಸ್ಪಷ್ಟಪಡಿಸಿದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿತವಾಗಲಿದೆ ಎಂದು ಕೆಲ ದಿನಗಳಿಂದ ವದಂತಿ ಹಬ್ಬಿತ್ತು. ದೈನಂದಿನ ಲೆಕ್ಕಾಚಾರದಲ್ಲಿ ಇಂಧನದ ಬೆಲೆ ಇಳಿಸುವ ಅವಕಾಶವನ್ನು ಕಂಪನಿಗಳಿಗೆ ನೀಡಲಾಗಿದೆ. ಕಳೆದ 21 ತಿಂಗಳಿನಿಂದಲೂ ಈ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಅವರು ಹೇಳಿದರು.














