ಪೆರುವಾಜೆ: ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಜ.16 ರಿಂದ 21 ರ ತನಕ ನಡೆಯಲಿರುವ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಪ್ರಯುಕ್ತ ಚಪ್ಪರ ಮುಹೂರ್ತ ಡಿ.10 ರಂದು ನಡೆಯಿತು.ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು. ಕ್ಷೇತ್ರದ
ಆಡಳಿತಾಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ, ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಕುಂಬ್ರ ದಯಾಕರ ಆಳ್ವ, ಮಾಜಿ ಸದಸ್ಯರಾದ ಬೋಜರಾಜ ಶೆಟ್ಟಿ ಕಲ್ಕಂಪಾಡಿಗುತ್ತು, ನಾರಾಯಣ ಕೊಂಡೆಪ್ಪಾಡಿ, ಪೆರುವಾಜೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸುನಿಲ್ ರೈ ಪೆರುವಾಜೆ, ಮಾಜಿ ಸೈನಿಕ ಸುದಾನಂದ, ಕ್ಷೇತ್ರದ ಕಚೇರಿ ವ್ಯವಸ್ಥಾಪಕ ವಸಂತ ಪೆರುವಾಜೆ, ಮೋನಪ್ಪ ಪೂಜಾರಿ, ಬಾಲಕೃಷ್ಣ ಆಚಾರ್ಯ, ವಿಜಯ ಪೆರುವಾಜೆ, ಧರ್ಮಪಾಲ, ರವಿಚಂದ್ರ ಮೊದಲಾದವರು ಉಪಸ್ಥಿತರಿದ್ದರು.
ಡಿ.10 ರಿಂದ ಚಪ್ಪರ ಮುಹೂರ್ತ ನಡೆದಿದ್ದು ಇಂದಿನಿಂದ ಚಪ್ಪರದ ಕೆಲಸ ಪ್ರಾರಂಭಗೊಳ್ಳಲಿದೆ. ಭಕ್ತಾಧಿಗಳು, ಸಂಘ ಸಂಸ್ಥೆಗಳು ಕರಸೇವೆ ಮೂಲಕ ಪಾಲ್ಗೊಳ್ಳುವಂತೆ ಕ್ಷೇತ್ರದ ಆಡಳಿತಾಧಿಕಾರಿ ವಿನಂತಿಸಿದ್ದಾರೆ.
.