ಪೆರಾಜೆ:ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಎ.5ರಂದು ರಾತ್ರಿ ಶ್ರೀ ಕರಿಭೂತ ಕೋಮಾಳಿ ಮಾಮೂಲು ಕೋಲಗಳು ನಡೆಯಿತು. ಎ.6 ರಂದು ಶ್ರೀ ಕರಿಭೂತ ಕೋಮಾಳಿ ದೈವಗಳ ಹರಕೆ ಕೋಲಗಳು ಸಂಪನ್ನಗೊಂಡಿತು. ಎ.4ರಂದು
ಶ್ರೀ ಕಲ್ಕುಡ ಮತ್ತು ಪಾಷಾಣಮೂರ್ತಿ ದೈವಗಳ ಕೋಲ ಹಾಗೂ ಶ್ರೀ ಕೊರಗ ತನಿಯ ದೈವಗಳ ಕೋಲ ನಡೆದವು ಎ 9ರಂದು ರಾತ್ರಿ ಒತ್ತಕೊಲಕ್ಕೆ ಕೂಡುವುದು, ಭಂಡಾರ ತೆಗೆಯುವುದು, ಮೇಲೇರಿ ಕುಲ್ಚಾಟ ನಡೆದು ಎ.10ರಂದು ಮುಂಜಾನೆ 5.30ರಿಂದ ಶ್ರೀ ಮಹಾವಿಷ್ಣು ಮೂರ್ತಿ ಒತ್ತೆಕೋಲ ಮತ್ತು ರುದ್ರಚಾಮುಂಡಿ ದೈವದ ಕೋಲ ಹಾಗೂ ಪ್ರಸಾದ ವಿತರಣೆ ನಡೆದು ಪೆರಾಜೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.