ಪೆರಾಜೆ: ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲದೊಂದಿಗೆ ಒಂದು ತಿಂಗಳ ಕಾಲ ನಡೆದ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಜಾತ್ರೋತ್ಸವ ಸಂಪನ್ನಗೊಂಡಿತು.ಮಾ.10 ರಿಂದ ಆರಂಭಗೊಂಡ ಕಾಲಾವಧಿ ಜಾತ್ರೋತ್ಸವದ ಅಂಗವಾಗಿ ಏ.10ರಂದು ವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯಿತು.ಬೆಳಿಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ ಹೊರಟು
ಅಗ್ನಿ ಪ್ರವೇಶ ನಡೆಯಿತು. ಬಳಿಕ ಪ್ರಸಾದ ವಿತರಣೆ ಮಾಡಿ ವಿಷ್ಣುಮೂರ್ತಿ ನೆರೆದ ಭಕ್ತರನ್ನು ಹರಸಿತು. ರುದ್ರಚಾಮುಂಡಿ ಕೋಲ, ಪ್ರಸಾದ ವಿತರಣೆ, ಮಾರಿಕಳದೊಂದಿಗೆ ಜಾತ್ರೋತ್ಸವ ಸಂಪನ್ನಗೊಂಡಿತು. ಏ.09ರಂದು ರಾತ್ರಿ ಒತ್ತೆಕೋಲ ಕೂಡುವಿಕೆ ನಡೆದು ಭಂಡಾರ ತೆಗೆದು, ಮೇಲೇರಿ ಕುಳ್ಳಾಟ ನಡೆದಿತ್ತು.
ಏ.ಒಂದರಂದು ಭಗವತಿಯ ದೊಡ್ಡ ಮುಡಿ ನಡೆದ ಬಳಿಕ ವಿವಿಧ ದಿನಗಳಲ್ಲಿ ವಿವಿಧ ದೈವ ಕೋಲಗಳು, ಕಾರ್ಯಕ್ರಮಗಳು ಸಂಪನ್ನಗೊಂಡಿತು.ಏ.4ರಂದು ಕಲ್ಕುಡ, ಪಾಷಾಣಮೂರ್ತಿ, ಕೊರಗ ತನಿಯ ದೈವಗಳ ಕೋಲ ನಡೆಯಿತು.ಏ.05ರಂದು ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ರಾತ್ರಿ ಶ್ರೀ ಕರಿಭೂತ ಕೋಮಾಳಿ ಮಾಮೂಲು ಕೋಲಗಳು ನಡೆದು ಏ.06 ರಂದು
ಶ್ರೀ ಕರಿಭೂತ ಕೋಮಾಳಿ ಮಾಮೂಲು ದೈವಗಳ ಹರಿಕೆ ಕೋಲ, ಏ.07 ರಂದು ರಾತ್ರಿ ಗುಳಿಗ ಕೋಲ ನಡೆಯಿತು. ಜಾತ್ರೋತ್ಸವದ ಅಂಗವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಶ್ರೀ ಶಾಸ್ತಾವು ಯಕ್ಷಗಾನ ಕಲಾ ಸಂಘ ಪೆರಾಜೆ, ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಮಿತಿ ಪೆರಾಜೆ ಮತ್ತು ನುರಿತ ಕಲಾವಿದರಿಂದ ಭೀಮಶಂಕರ ಮಹಿಮೆ ಯಕ್ಷಗಾನ ಬಯಲಾಟ. ಸಾರ್ವಜನಿಕ ಪುರುಷರ ಮುಕ್ತ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟ ಹಮ್ಮಿಕೊಳ್ಳಲಾಯಿತು.