ಚಿತ್ರ-ವರದಿ: ಅಶೋಕ್ ಪೀಚೆ.
ಪೆರಾಜೆ: ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ನಡೆದ ಒಂದು ತಿಂಗಳ ಕಾಲ ನಡೆದ ಕಾಲಾವಧಿ ಜಾತ್ರೋತ್ಸವದ ಬಳಿಕ ಏ.11ರಂದು ಸ್ವಚ್ಚತಾ ಕಾರ್ಯ ನಡೆಸಲಾಯಿತು. ಶ್ರೀದುರ್ಗಾ ಮತ್ತು ಲಕ್ಷ್ಮಿ ಸ್ವಸಹಾಯ ಸಂಘದ ಸದಸ್ಯರಿಂದ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ
ನಡೆಸಿದರು. ದೇವಸ್ಥಾನದ
ವಠಾರ, ದೇವಸ್ಯಾನದ ಒಳಗಡೆ, ಆವರಣಗಳಲ್ಲಿ ಸ್ವಚ್ಛತಾ ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು, ಸದಸ್ಯರು ಗ್ರಾಮಸ್ಥರು ಸೇರಿ ದೇವಸ್ಥಾನದ ಪರಿಸರ, ಆವರಣ, ಹೊರಾಂಗಣದಲ್ಲಿ ಸ್ವಚ್ಚತಾ ಕಾರ್ಯ ನೆರವೇರಿಸಿದರು. ಮಾ.9ರಂದು ಆರಂಭಗೊಂಡ ಜಾತ್ರೆ ಒತ್ತೆಕೋಲದೊಂದಿಗೆ ಏ.10ರಂದು ಸಮಾಪನಗೊಂಡಿತು.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು ಪದಾಧಿಕಾರಿಗಳು, ಸದಸ್ಯರು ಗ್ರಾಮಸ್ಥರು ಭಾಗವಹಿಸಿದ್ದರು.