ಸುಳ್ಯ: ಇಂದು ಸಂಜೆ ವಿವಿಧ ಭಾಗಗಳಲ್ಲಿ ಗುಡುಗು ಸಹೀತ ಮಳೆಯಾಗಿದೆ. ಪೆರಾಜೆ ಗ್ರಾಮದ ವಿವಿಧ ಭಾಗಗಳಲ್ಲಿ ಮಳೆ ಸುರಿದಿದೆ. ಭಾರೀ ಗಾಳಿಗೆ ವಿವಿಧ ಕಡೆ ಹಾನಿ ಸಂಭವಿಸಿದೆ. ಪೆರಾಜೆ ಗ್ರಾಮದ

ನಿಡ್ಯಮಲೆ, ಕುಂಡಾಡು, ಕುಂದಲ್ಪಾಡಿ ಬಂಗಾರಕೋಡಿ, ಪೆರುಮುಂಡ, ಕರಂಟಡ್ಕ ಮತ್ತಿತರ ಭಾಗಗಳಲ್ಲಿ ಗಾಳಿಗೆ ಹಾನಿ ಸಂಭವಿಸಿದೆ.ಮರ ಮುರಿದು ಬಿದ್ದು ವಿದ್ಯುತ್ ಕಂಬಗಳ ಮೇಲೆ ಬಿದ್ದು ಲೈನ್, ಬಿದ್ದು
ವಿದ್ಯುತ್ ಲೈನ್ಗೆ ಹಾನಿ ಉಂಟಾಗಿದೆ. ಕೆಲವೆಡೆ ಮರ ಮುರಿದು ಮನೆಗಳ ಮೇಲೆ, ರಸ್ತೆಗೆ ಅಡ್ಡಲಾಗಿ ಬಿದ್ದಿದೆ.ಮನೆಗಳ ಶೀಟ್ಗಳು ಹಾರಿ ಹೋಗಿದೆ. ಶಾಮಿಯಾನ, ಪೆಂಡಾಲ್ಗಳು ಹಾರಿ ಹೋಗಿದೆ.ಒಟ್ಟಿನಲ್ಲಿ ಗಾಳಿ, ಮಳೆಗೆ ಪೆರಾಜೆ ಗ್ರಾಮದಲ್ಲಿ ವಿವಿಧೆಡೆ ಹಾನಿ ಸಂಭವಿಸಿದೆ.