ಪೆರಾಜೆ:ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಭಕ್ತಿ ಸಂಭ್ರಮದ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯುವುದರೊಂದಿಗೆ ಕಾಲಾವಧಿ ಜಾತ್ರೋತ್ಸವ ಸಂಪನ್ನಗೊಂಡಿತು. ಮಾ.9ರಿಂದ ಆರಂಭಗೊಂಡು ಕಾಲಾವಧಿ ಜಾತ್ರೋತ್ಸವ ಎ.10ರ ತನಕ ಒಂದು ತಿಂಗಳ ಕಾಲ ನಡೆದ ಜಾತ್ರೋತ್ಸವ ಸಮಾಪನಗೊಂಡಿತು. ಎ.9ರಂದು ರಾತ್ರಿ
ಒತ್ತೆಕೋಲ ಕೂಡಿ ಭಂಡಾರ ತೆಗೆಯುವುದು, ಮೇಲೇರಿಗೆ ಅಗ್ನಿ ಸ್ಪರ್ಶ, ವಿಷ್ಣುಮೂರ್ತಿ ದೈವದ ಕುಳ್ಚಾಟ ನಡೆಯಿತು. ಎ.10ರಂದು ಮುಂಜಾನೆಯಿಂದ ಶ್ರೀ ಮಹಾವಿಷ್ಣುಮೂರ್ತಿ ದೈವದ ಮೇಲೇರಿ ಪ್ರವೇಶ ನಡೆಯಿತು. ವಿಷ್ಣುಮೂರ್ತಿ ಮತ್ತು ರುದ್ರ ಚಾಮುಂಡಿ ದೈವಗಳು ನೆರೆದ ಭಕ್ತ ಸಮೂಹವನ್ನು ಹರಸಿತು. ಬಳಿಕ ಮಾರಿಕಳ ನಡೆಯಿತು.

ಕ್ರೀಡಾ ಸಂಭ್ರಮ:
ಜಾತ್ರೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಭ್ರಮ ನಡೆಯಿತು. ಎ.9ರಂದು ರಾತ್ರಿ ಸಾರ್ವಜನಿಕ ಪುರುಷರ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಡೆಯಿತು.ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ ಪಂದ್ಯಾಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು,ಸಹ ಕಾರ್ಯದರ್ಶಿ, ಚಿನ್ನಪ್ಪ ಅಡ್ಕ,ದೇವತಕ್ಕರಾದ

ರಾಜಗೋಪಾಲ ರಾಮಕಜೆ ತಕ್ಕ ಮುಖ್ಯಸ್ಥರಾದ
ಭಾಸ್ಕರ ಕೋಡಿ, ವಿಶ್ವನಾಥ ಮೂಲೆಮಜಲು, ವಾಸುದೇವ ಕೋಡಿ, ಕುಶಾಲಪ್ಪ ಕುಂಬಳಚೇರಿ ಪುರುಷೋತ್ತಮ ನಿಡ್ಯಮಲೆ, ಪ್ರಮುಖರಾದ ನಾಗೇಶ್ ಕುಂದಲ್ಪಾಡಿ, ಡಾ.ಡಿ.ವಿ.ಲೀಲಾಧರ, ಡಾ.ಲಕ್ಷ್ಮೀಶ, ದೊಡ್ಡಣ್ಣ ಬರೆಮೇಲು, ದೇವಸ್ಥಾನದ
ಆಡಳಿತ ಸಮಿತಿ ಸದಸ್ಯರುಗಳು, ಸಾಮಾಜಿಕ, ಧಾರ್ಮಿಕ ಹಾಗೂ
ರಾಜಕೀಯ ಮುಖಂಡರು ಅರ್ಚಕ ವೃಂದ ಹಾಗೂ ಊರ ಪರವೂರ ಭಗವದ್ಭಕ್ತರು ಇದ್ದರು.












