ಪೆರಾಜೆ: ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಮಾ.25ರರಂದು ಉಗ್ರಾಣ ತುಂಬಿಸುವದರೊಂದಿಗೆ ಆರಂಭಗೊಂಡಿದೆ. ಆ. ಮಾ.9ರಂದು ಮುಹೂರ್ತದ ಗೊನೆ ಕಡಿಯುವದರೊಂದಿಗೆ ಆರಂಭಗೊಂಡು ಕಾಲಾವಧಿ ಜಾತ್ರೋತ್ಸವ ಎ.10ರ ತನಕ ಒಂದು ತಿಂಗಳ ಕಾಲ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಛಿಲತ್ತಾಯ ಪದ್ಮನಾಭ ತಂತ್ರಿಯವರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು
ದೇವಸ್ಥಾನದ ಆಡಳಿತ ಮೊಕ್ತಸರರಾದ ಜಿತೇಂದ್ರ ನಿಡ್ಯಮಲೆ ಹಾಗೂ ಆಡಳಿತ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಎ.ಒಂದರಂದು ಪೆರಾಜೆ ಭಗವತಿಯ ದೊಡ್ಡ ಮುಡಿ ದರ್ಶನ ಆಗಲಿದೆ.
26ರಂದು ಪೂ. ಕಲಶೋತ್ಸವ, ಮಹಾಪೂಜೆ, ಮಹಾಸಮಾರಾಧನೆ ನಡೆಯಿತು.ಸಾಯಂಕಾಲ 4ಕ್ಕೆ ಶ್ರೀ ಉಳ್ಳಾಗುಳ ಮಾಡದ ಅರಮನೆಯಿಂದ ಭಂಡಾರ ತರುವುದು. ಸಾಯಂಕಾಲ 5ಕ್ಕೆ ಮುಖ ತೋರಣ ಏರಿಸುವುದು 5-30ರಿಂದ ಶಿಸ್ತು ಅಳೆಯುವುದು, ರಾತ್ರಿ 7-45ರಿಂದ ದೇವರ ಶ್ರೀ ಭೂತಬಲಿ, ದೇವರ ನೃತ್ಯ ಬಲಿ ನಂತರ ಕಟ್ಟೆ ಪೂಜೆ ನಡೆಯಲಿದೆ.

ಮಾ.27ರಂದುಬೆಳಿಗ್ಗೆ 9ರಿಂದ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ರಾತ್ರಿ 8 ರಿಂದ ತುಳು ಕೋಲದ ಬೆಳ್ಳಾಟ 2 , ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ ತುಳು ಕೋಲ ತಿರುವಪ್ಪಗಳು 2
ಮಾ.28ರಂದು ಮಧ್ಯಾಹ್ನ 12 ರಿಂದ ಬೇಟೆಕರಿಮಗನ್ ಈಶ್ವರನ್ ದೈವ ರಾತ್ರಿ 8 ರಿಂದ ತುಳು ಕೋಲ 2ರ ಬೆಳ್ಳಾಟ,
ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ ಮತ್ತು ಅವುಗಳ ತಿರುವಪ್ಪಗಳು.
ಮಾ.29ರಂದು ಮಧ್ಯಾಹ್ನ 12 ರಿಂದ ಬೇಟೆಕರಿಮಗನ್ ಈಶ್ವರನ್ ದೈವ. ರಾತ್ರಿ 6.30ರಿಂದ ಪಳ್ಳಿಯಾರ ಬಾಗಿಲು ತೆರೆಯುವುದು, ಕರಿಂತಿರಿ ನಾಯರ್ ಪುಲಿಮಾರುತನ್ ದೈವಗಳ ಬೆಳ್ಳಾಟಗಳು, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ ತುಳು ಕೋಲದ ಬೆಳ್ಳಾಟಗಳು 2 ಮತ್ತು ಅವುಗಳ ತಿರುವಪ್ಪಗಳು 2.
ಮಾ.30ರಂದು ಬೆಳಿಗ್ಗೆ 10 ರಿಂದ ಕರಿಂತಿರಿ ನಾಯರ್ ದೈವ, ಪುಲಿಮಾರುತನ್ ದೈವ ಮತ್ತು ಬೇಟೆ ಕರಿಮಗನ್ ಈಶ್ವರನ್ ದೈವ, ರಾತ್ರಿ 8ರಿಂದ ಕಾಳ ಪುಲಿಯನ್ ಮತ್ತು ಪುಲಿಕಂಡನ್ ದೈವಗಳ ಬೆಳ್ಳಾಟಗಳು ನಂತರ ತುಳು ಕೋಲಗಳ ಬೆಳ್ಳಾಟ 2 ,ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲಗಳ ತಿರುವಪ್ಪಗಳು 2 ನಡೆಯಲಿದೆ.

ಮಾ.31ರಂದು ಬೆಳಿಗ್ಗೆ 8 ರಿಂದ ಕಾಳ ಪುಲಿಯನ್ ಮತ್ತು ಪುಲಿಕಂಡನ್ ದೈವಗಳು, ಮಧ್ಯಾಹ್ನ 12ರಿಂದ ಬೇಟೆ ಕರಿಮಗನ್ ಈಶ್ವರನ್ ದೈವ ರಾತ್ರಿ ಗಂಟೆ 7-30ರಿಂದ ಭಗವತಿ ದೇವಿ ಸಮಾರಾಧನೆ ರಾತ್ರಿ 8 ರಿಂದ ಪುಲ್ಲೂರ್ ಕಣ್ಣನ್ ಬೆಳ್ಳಾಟ 1, ತುಳು ಕೋಲಗಳು ಬೆಳ್ಳಾಟ 1 ಮಲೆಕಾರಿ ಬೆಳ್ಳಾಟ 1, ವಿಷ್ಣುಮೂರ್ತಿ ತೊಡಙಲ್, ರಕೇಶ್ವರಿ ತೊಡಂಙಲ್, ಪೊಟ್ಟನ್ ದೈವದ ತೊಡಂಙಲ್, ಬೇಟೆ ಕರಿಮಗನ್ ಬೆಳ್ಳಾಟ, ಭಗವತಿ ಕಲಶ ಬರುವುದು ಮತ್ತು ಭಗವತಿ ತೋಟ್ಟಂ, ಆಯರ್ ಭಗವತಿ ತೋಟ್ಟಂ, ಪುಲ್ಲೂರುಕಾಳಿ ತೋಟ್ಟಂ,
ತುಳುಕೋಲ ಮತ್ತು ಮಲೆಕ್ಕಾರಿ ತಿರುವಪ್ಪಗಳು ನಡೆಯಲಿದೆ.
ಎ.1ರಂದು ಬೆಳಿಗ್ಗೆ 6ರಿಂದ ಪೊಟ್ಟನ್ ದೈವ, ರಕ್ತೇಶ್ವರಿ, ಆಯರ್ ಭಗವತಿ, ಪುಲ್ಲೂರು ಕಾಳಿ, ಪುಲ್ಲೂರುಕಣ್ಣನ್, ವಿಷ್ಣುಮೂರ್ತಿ ದೈವ ಮತ್ತು ಬೇಟೆಕರಿಮಗನ್ ಈಶ್ವರನ್ ದೈವ ಮಧ್ಯಾಹ್ನ 12-30ಕ್ಕೆ ಮಹಾಪೂಜೆ,ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ನಡೆಯಲಿದೆ.ಅಪರಾಹ್ನ ಗಂಟೆ 4ಕ್ಕೆ ಶ್ರೀ ಭಗವತಿಯ ದೊಡ್ಡಮುಡಿ ನಡೆಯಲಿದೆ.ರಾತ್ರಿ ಗಂಟೆ 8ಕ್ಕೆ ಪಯ್ಯೋಳಿ,ಎ.2 ರಂದು

ರಾತ್ರಿ ಗಂಟೆ 7-00ಕ್ಕೆ ವಾಲಸಿರಿ
ಎ.3 ಮಧ್ಯಾಹ್ನ ಗಂಟೆ 12-30ರಿಂದ ಮಹಾಪೂಜೆ ನಂತರ ಸಮಾರಾಧಾನೆ ಸಂಜೆ ಗಂಟೆ 6 ರಿಂದ ದೇವಳದಿಂದ ಉಳ್ಳಾಗುಳ ಭಂಡಾರ ಹೊರಟು ಮಂಟಮೆಯಲ್ಲಿ ಹಿರಿಯರ ನೇಮಕ್ಕೆ ಮುಡಿಯಾಗಿ ನೇಮ ನಂತರ ಸೋಮಕೊಟ್ಯಕ್ಕೆ ತೆರಳಿ ತಂಬಿಲ, ಮಾಡಕ್ಕೆ ಹಿಂತಿರುಗಿ ಕಿರಿಯರ ನೇಮ ಮತ್ತು ರುದ್ರ ಚಾಮುಂಡಿ ನಡೆಯಲಿದೆ. ಎ.4ರಂದು ಸಂಜೆ 6 ರಿಂದ ಶ್ರೀ ಕಲ್ಕುಡ ಮತ್ತು ಪಾಷಾಣಮೂರ್ತಿ ದೈವಗಳ ಕೋಲ ಹಾಗೂ ಶ್ರೀ ಕೊರಗ ತನಿಯ ದೈವದ ಕೋಲಗಳು ನಡೆಯಲಿದೆ.
ಎ.5ರಂದು ರಾತ್ರಿ 8ರಿಂದ ಶ್ರೀ ಕರಿಭೂತ ಕೋಮಾಳಿ ಮಾಮೂಲು ಕೋಲಗಳು. ಎ.6 ರಂದು ರಾತ್ರಿ 8ರಿಂದ ಶ್ರೀ ಕರಿಭೂತ ಕೋಮಾಳಿ ದೈವಗಳ ಹರಿಕೆ ಕೋಲಗಳು ನಡೆಯಲಿದೆ. ಎ.7 ರಂದು ರಾತ್ರಿ 7ರಿಂದ ಗುಳಿಗನ ಕೋಲ ನಡೆಯಲಿದೆ. ಎ.9ರಂದು ರಾತ್ರಿ 8 ರಿಂದ ಒತ್ತೆಕೋಲಕ್ಕೆ ಕೂಡುವುದು, ಭಂಡಾರ ತೆಗೆಯುವುದು ಮೇಲೇರಿ ಕುಳ್ಚಾಟ. ಎ.10ರಂದು ಬೆಳಿಗ್ಗೆ 5-30ರಿಂದ ಶ್ರೀ ಮಹಾವಿಷ್ಣುಮೂರ್ತಿ ಒತ್ತೆಕೋಲ ಮತ್ತು ರುದ್ರ ಚಾಮುಂಡಿ ಕೋಲ ಹಾಗೂ ಪ್ರಸಾದ ವಿತರಣೆ ಮಾರಿಕಳ ನಡೆಯುವುದರೊಂದಿಗೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.
ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮ:
ಜಾತ್ರೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಭ್ರಮ ಏರ್ಪಡಿಸಲಾಗಿದೆ. ಮಾ.29ರಂದು ಸಂಜೆ 6.30 ರಿಂದ ನೃತ್ಯ ಸಂಭ್ರಮ. ಎ.2ರಂದುಎ.5ರಂದು ಶ್ರೀ ಶಾಸ್ತಾವು ಯಕ್ಷಗಾನ ಕಲಾ ಸಂಘ ಪೆರಾಜೆ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ‘ರತ್ನಾವತಿ ಕಲ್ಯಾಣ’ ನಡೆಯಲಿದೆ.ಎ.9ರಂದು ರಾತ್ರಿ ಗಂಟೆ 8-00ರಿಂದ ಸಾರ್ವಜನಿಕ ಪುರುಷರ ಗ್ರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಡೆಯಲಿದೆ ಎಂದು ಜಿತೇಂದ್ರ ನಿಡ್ಯಮಲೆ ತಿಳಿಸಿದ್ದಾರೆ.










