ಪೆರಾಜೆ: ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಮಾ.25ರರಂದು ನಡೆಯುತ್ತಿದ್ದು.ಮಾ.27ರಂದುಬೆಳಿಗ್ಗೆ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ 8 ರಿಂದ ತುಳು ಕೋಲದ ಬೆಳ್ಳಾಟ 2 , ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ ತುಳು ಕೋಲ ತಿರುವಪ್ಪಗಳು 2 ನಡೆಯಲಿದೆ. 26ರಂದು
ಸಂಜೆ ಶ್ರೀ ಉಳ್ಳಾಗುಳ ಮಾಡದ ಅರಮನೆಯಿಂದ ಭಂಡಾರ ತರಲಾಯಿತು.ಮುಖ ತೋರಣ ಏರಿಸುವುದು, ಶಿಸ್ತು ಅಳೆಯುವುದು ನಡೆಯಿತು. ರಾತ್ರಿ ದೇವರ ಶ್ರೀ ಭೂತಬಲಿ, ದೇವರ ನೃತ್ಯ ಬಲಿ ನಂತರ ಕಟ್ಟೆ ಪೂಜೆ ನಡೆಯಿತು. ದೇವಸ್ಥಾನದ ಆಡಳಿತ ಮೊಕ್ತೇಸರರಾದ
ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು,ಸಹ ಕಾರ್ಯದರ್ಶಿ ಚಿನ್ನಪ್ಪ ಅಡ್ಕ,ದೇವತಕ್ಕರಾದ ರಾಜಗೋಪಾಲ ರಾಮಕಜೆ,ತಕ್ಕ ಮುಖ್ಯಸ್ಥರು ಉಪಸ್ಥಿತರಿದ್ದರು.










