ಪೆರಾಜೆ:ಶಾಸಕರಾದ ಬಳಿಕ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜನಸೇವಕನಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗಿಸಿಕೊಂಡು ಪೆರಾಜೆ ಗ್ರಾಮಕ್ಕೆ 33 ಕೆವಿ ವಿದ್ಯುತ್ ಸ್ಥಾವರ ಸ್ಥಾಪನೆ ಸೇರಿದಂತೆ 19 ಕೋಟಿಗೂ ಅಧಿಕ ಅನುದಾನಗಳನ್ನು ಬಿಡುಗಡೆಮಾಡಿ, ಸಾಕಷ್ಟು ಅಭಿವೃದ್ಧಿ ಕೆಲಸವನ್ನು
ಮಾಡಲಾಗಿದೆ. ನಾನಾ ಕಾಮಗಾರಿಗಳಿಗೂ ಚಾಲನೆ ನೀಡಿದ್ದೇನೆ. ಗ್ರಾಮ ಇನ್ನುಷ್ಟು ಅಭಿವೃದ್ಧಿ ಹೊಂದಲು ಇನ್ನಷ್ಟು ಅನುದಾನಗಳನ್ನು ಸಿದ್ಧನಿದ್ದೇನೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ಅವರು ಪೆರಾಜೆಯಲ್ಲಿ 19 ಕೋಟಿ ರೂ ಅನುದಾನಗಳ ನಾನಾ ಕಾಮಗಾರಿಗಳಿಗೆ ಗುದ್ದಲಿಪೂಜೆ-ಚಾಲನೆ ನೀಡಿ, ಮಾತನಾಡಿದರು.
೧ ಕೋಟಿ ೭೫ ಲಕ್ಷ ವೆಚ್ಚದಲ್ಲಿ ಕುಂಬಳಚೇರಿ-ಕೂರ್ನಡ್ಕ ರಸ್ತೆ ಅಭಿವೃದ್ಧಿ, ಕೆ.ಪೆರಾಜೆ ಯಿಂದ ಕುಂಬಳಚೇರಿ- ಕೂರ್ನಡ್ಕ ರಸ್ತೆಯನ್ನು ಜಿಲ್ಲಾ ಮುಖ್ಯರಸ್ತೆಯನ್ನಾಗಿ ಮೇಲ್ದರ್ಜೆ ಏರ್ಪಟ್ಟು ರಸ್ತೆ ಅಭಿವೃದ್ಧಿಗೆ ೩ ಕೋಟಿ ೭೫ ಲಕ್ಷ ಅನುದಾನದಲ್ಲಿ ಕಾಮಗಾರಿಗೊಂಡ ರಸ್ತೆ ಉದ್ಘಾಟನೆ, ಕೆ.ಪೆರಾಜೆ-ಕುಂಬಳಚೇರಿ-ಕೂರ್ನಡ್ಕ ರಸ್ತೆ ಅಭಿವೃದ್ಧಿಗೆ ೧.೫ ಕೋಟಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ, ೧೫ ಲಕ್ಷ ಅನುದಾನದಲ್ಲಿ ಕೆಂಚನಮೂಲೆ ರಸ್ತೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ , ಈಗಾಲೇ ಮಂಜೂರುಗೊಂಡ ೨೫ ಲಕ್ಷದ ಹೊಸ ಅನುದಾನದಲ್ಲಿ ಪೆರುಮುಂಡ-ಪೀಚೆ ರಸ್ತೆ ಮತ್ತು ಇತರ ೪ ರಸ್ತೆಗಳ ಕಾಂಕ್ರೀಟೀಕರಣಕ್ಕೆ ಗುದ್ದಲಿಪೂಜೆ, ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರುಗೊಂಡ ೫೦ಲಕ್ಷ ಅನುದಾನದಲ್ಲಿ ತಡೆಗೋಡೆ ಕಾಮಗಾರಿ ಗುದ್ದಲಿಪೂಜೆ, ೧೧ ಲಕ್ಷ ಅನುದಾನ ಕೋಟೆಪೆರಾಜೆ-ಬಂಗಾರಕೋಡಿ-ಕರಿಭೂತನಕೋಡಿ ರಸ್ತೆಗೆ ೨ ಕಾಲು ಸೇತುವೆ ಕಾಮಗಾರಿಗೆ ಚಾಲನೆ, ಕನ್ನಡ ಪೆರಾಜೆ ಮತ್ತು ಗಡಿಗುಡ್ಡೆಯಲ್ಲಿ ವಿದ್ಯುತ್ ಪರಿವರ್ಧಕ, ಅಲ್ಲದೆ ೩೩ ಕೆವಿ ವಿದ್ಯುತ್ ಸಬ್ ಸ್ಟೇಶನ್ ನ ಸ್ಥಳ ಮಂಜೂರಾತಿ ಆದೇಶ ಪತ್ರ ಚೆಸ್ಕಾಂ ಇಲಾಖೆಗೆ ಹಸ್ತಾಂತರ, ವಿಶೇ಼ಷ ಅನುದಾನದ ೩೫ಲಕ್ಷ ಮತ್ತು ೨೫ ಲಕ್ಷ ಅನುದಾನ ಮಂಜೂರುಗೊಂಡ ಎಲ್ಲ ಕಾಮಗಾರಿಗಳನ್ನು ಉದ್ಘಾಟನೆ, ಪೆರಾಜೆ ಪೇಟೆಯಲ್ಲಿ ಬಸ್ ತಂಗುದಾಣ ಉದ್ಘಾಟನೆ, ಸೇರಿದಂತೆ ನಾನಾ ಕಾಮಗಾರಿಗಳಿಗೆ ಚಾಲನೆ ನೀಡಿ , ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಪೆರಾಜೆ ಗ್ರಾ.ಪಂ.ಸದಸ್ಯ ಸುರೇಶ್ ಪೆರುಮುಂಡ, ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ನಾಪೋಕ್ಲು ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಮನು ಪೆರುಮುಂಡ, ಪೆರಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಜಯರಾಮ ಪೆರುಮುಂಡ, ಕಾರ್ಯದರ್ಶಿ ಹರಿಪ್ರಸಾದ ಪೆರಂಗಜೆ, ಮುಖಂಡರಾದ ಅಬೂಬಕ್ಕರ್ ಪೆರಾಜೆ, ಹನೀಫ್ ಕೊಯನಾಡು, ಚಿದಾನಂದ ಪೀಚೆ, ಹಿಮಕರ ವ್ಯಾಪಾರೆ, ಭವಿತ್ ಪೆರಂಗಾ ಜೆ, ಪ್ರೇಮಚಂದ್ರ ಕುದ್ಕುಳಿ, ಯೋಗಿತ್ ಪೆರಂಗಜೆ, ಶರತ್ ಪೆರುಮುಂಡ, ಪಾರ್ಶ್ವನಾಥ ಪೆರುಮುಂಡ, ಜನಾರ್ಧನ ನಾಯ್ಕ ನಿಡ್ಯಮಲೆ, ನೇಮಿರಾಜ ಪಾರೆ, ಶಿಹಾಬ್ ಪೆರಾಜೆ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು. ಪಿಡಬ್ಲ್ಯುಡಿ ರಸ್ತೆ ಉದ್ಘಾಟನೆ ಸಂದರ್ಭದಲ್ಲಿ ಪಿಡಬ್ಲ್ಯುಡಿ ಸಹಾಯಕ ಕಾರ್ಯಪಾಲಕ ಅಭಿಯಂತರ ಗಿರೀಶ್, ಪೆರಾಜೆ ಬಸ್ ನಿಲ್ದಾಣದ ಉದ್ಘಾಟನೆ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಮಾರ್ ಉಪಸ್ಥಿತರಿದ್ದರು.












