ಸುಳ್ಯ:ಜೇಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ನಡೆದ ರಾಷ್ಟ್ರೀಯ ಅಧ್ಯಕ್ಷರ ಅಧಿಕೃತ ಭೇಟಿ ಮತ್ತು ಮಲ್ಟಿ ಲೋ ಮೀಟ್ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಜೇಸಿಐ ರಾಷ್ಟ್ರೀಯ ಅಧ್ಯಕ್ಷರ ಭಾವಚಿತ್ರದ ಪೆನ್ಸಿಲ್ ಆರ್ಟ್ ಬಿಡಿಸುವ ಸ್ಪರ್ಧೆಯಲ್ಲಿ
ಜೇಸಿಐ ಸುಳ್ಯ ಪಯಸ್ವಿನಿ ಘಟಕದಿಂದಾ ಸ್ಪರ್ಧಿಸಿದ ಸುಳ್ಯ ಶಾಂತಿನಗರ ಬೆಟ್ಟಂಪಾಡಿಯ ಪೂಜಾ ಬೋರ್ಕಾರ್ಗೆ ಪ್ರಥಮ ಸ್ಥಾನ ಲಭಿಸಿದೆ. ಪೂಜ ರಚಿಸಿದ ಪೆನ್ಸಿಲ್ ಆರ್ಟ್ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿದೆ.
ಮೆಚ್ಚುಗೆಗೆ ಪಾತ್ರವಾದ ಈ ಪೆನ್ಸಿಲ್ ಆರ್ಟ್ ಅನ್ನು ಸುಳ್ಯ ಪಯಸ್ವಿನಿ ಘಟಕದ ಅಧ್ಯಕ್ಷ ಗುರುಪ್ರಸಾದ್ ನಾಯಕ್ ರಾಷ್ಟ್ರೀಯ ಅಧ್ಯಕ್ಷರಿಗೆ ನೀಡಿದರು.ಸುಳ್ಯದಿಂದ ಕುಂದಾಪುರದವರೆಗೆ ಇರುವ ಜೇಸಿಐ ವಲಯ 15 ರಿಂದ ಪೆನ್ಸಿಲ್ ಆರ್ಟ್ ಸ್ಪರ್ಧೆ ಏರ್ಪಡಿಸಲಾಗಿತ್ತು.