ಚೆನ್ನೈ: ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 4 ವಿಕೆಟ್ ಅಂತರದಲ್ಲಿ ಪರಾಭವಗೊಳಿಸಿತು.
ಮೊದಲು ಬ್ಯಾಟ್ ಮಾಡಿದ ಚೆನ್ನೈ 19.2 ಓವರ್ಗಳಲ್ಲಿ190 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಂಜಾಬ್ 19.4 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿ ಗೆಲುವಿನ ನಗೆ ಬೀರಿದರು. ಪಂಜಾಬ್ ಪರ
ನಾಯಕ ಶ್ರೇಯಸ್ ಅಯ್ಯರ್ ಹಾಗೂ ಪ್ರಭ್ಸಿರ್ಮಾನ್ ಸಿಂಗ್ ಅರ್ಧ ಶತಕ ಗಳಿಸಿದರು. ಶ್ರೇಯಸ್ 41 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 72 ರನ್ ಪ್ರಭ್ಸಿರ್ಮಾನ್ ಸಿಂಗ್ 36 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 54 ರನ್ ಭಾರಿಸಿದರು.
ಮೊದಲು ಬ್ಯಾಟ್ ಮಾಡಿದ ಚೆನ್ನೈಗೆ ಯಜುವೇಂದ್ರ ಚಾಹಲ್ ಹ್ಯಾಟ್ರಿಕ್ ಸೇರಿದಂತೆ ನಾಲ್ಕು ವಿಕೆಟ್ಗಳನ್ನು ಪಡೆದು ಕಡಿವಾಣ ಹಾಕಿದರು. ಚೆನ್ನೈ ತಂಡಕ್ಕೆ ಸ್ಯಾಮ್ ಕರನ್ ಆಧಾರವಾದರು. ಕರನ್ 47 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ಗಳಿದ್ದ 88 ರನ್ ಗಳಿಸಿದರು. ಕರನ್ ಡೆವಾಲ್ಡ್ ಬ್ರೆವಿಸ್ (32, 26 ಎಸೆತ) ಜೊತೆ ನಾಲ್ಕನೇ ವಿಕೆಟ್ಗೆ 78 ರನ್ ಸೇರಿಸಿ ಕುಸಿತ ತಪ್ಪಿಸಿದರು.
ಪಂಜಾಬ್ ಪರ ಅರ್ಷದೀಪ್ ಸಿಂಗ್ 25ಕ್ಕೆ2, ಮಾರ್ಕೊ ಯಾನ್ಸೆನ್ 30ಕ್ಕೆ2, ಯಜುವೇಂದ್ರ ಚಾಹಲ್ 32ಕ್ಕೆ4 ವಿಕೆಟ್ ಪಡೆದರು.





