ಮುಲ್ಲನಪುರ: ಐಪಿಎಲ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ 18 ರನ್ಗಳ ಅಂತರದಿಂದ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತ್ತು.220 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ್ದ ಚೆನ್ನೈ 20 ಓವರ್ಗಳಲ್ಲಿ
5 ವಿಕೆಟ್ ಕಳೆದುಕೊಂಡು 201 ರನ್ ಗಳಿಸಲಷ್ಟೇ ಶಕ್ತವಾಯಿತು.
ಚೆನ್ನೈ ಪರ ರಚಿನ್ ರವೀಂದ್ರ (36), ಡಿಯೋನ್ ಕಾನ್ವೆ(69), ಶಿವಂ ದುಬೆ(42), ಮಹೇಂದ್ರ ಸಿಂಗ್ ಧೋನಿ (27) ಹೋರಾಟ ನಡೆಸಿದರೂ ತಂಡ ಗೆಲುವಿನ ದಡ ಸೇರಲಿಲ್ಲ.
ಮೊದಲು ಬ್ಯಾಟ್ ಮಾಡಿದ ಪಂಜಾಬ್ಗೆ ಏಕಾಂಗಿ ಹೋರಾಟ ನಡೆಸಿದ ಪ್ರಿಯಾಂಶ್ ಆರ್ಯಾ ಅಬ್ಬರದ ಶತಕ ಉತ್ತಮ ಸ್ಕೋರ್ ಗಳಿಸಲು ನೆರವಾದರು. ಪ್ರಿಯಾಂಶ್ ಆರ್ಯ 42 ಎಸೆತಗಳಲ್ಲಿ 9 ಭರ್ಜರಿ ಸಿಕ್ಸರ್, 8 ಬೌಂಡರಿ ನೆರವಿನಿಂದ 103 ರನ್ ಗಳಿಸಿದರು. ಆರಂಭಿಕ ಆಟಗಾರ, ಪ್ರಭ್ಸಿಮ್ರಾನ್ ಖಾತೆ ತೆರೆಯದೆ ಫೆವಿಲಿಯನ್ ಸೇರಿಕೊಂಡರು. ನಂತರ ಬಂದ ಶ್ರೇಯಸ್ ಅಯ್ಯರ್ 9, ಮಾರ್ಕಸ್ ಸ್ಟೋಯಿನಸ್ 4 ರನ್, ನೆಹಾಲ್ ವಡೇರಾ 9, ಗ್ಲೆನ್ ಮ್ಯಾಕ್ಸ್ವೆಲ್ 9 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ವಿಕೆಟ್ ಬೀಳ್ತಾ ಇದ್ರೂ ಕೂಡ ಕ್ರೀಸ್ ಕಚ್ಚಿ ನಿಂತಿದ್ದ ಪ್ರಿಯಾಂಶ್ಗೆ ಶಶಾಂಕ್ ಸಿಂಗ್ 36 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್, 2 ಬೌಂಡರಿ ನೆರವಿನಿಂದ 52 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು. ಕೊನೆಯಲ್ಲಿ ಮಾರ್ಕೋ ಜಾನ್ಸನ್ ಬೀಸಾಟ ಆಡಿ 19
ಎಸೆತಗಳಲ್ಲಿ 2 ಸಿಕ್ಸರ್, 2 ಬೌಂಡರಿ ನೆರವಿನಿಂದ
34 ರನ್ ಗಳಿಸಿ ಅಜೇಯಯರಾಗಿ ಉಳಿದುಕೊಂಡರು. ಈ ಮೂವರ ಆಟದ ನೆರವಿನಿಂದ ನಿಗದಿತ 20 ಓವರ್ನಲ್ಲಿ 219 ರನ್ ಗಳಿಸಿತು.