ಪಂಜ:ಸೀಮೆ ದೇವಸ್ಥಾನ ಪಂಜ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ ನಡೆಯುತಿದೆ. ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್
ದೀಪ ಪ್ರಜ್ವಲನ ಮಾಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಧರ್ಮಣ್ಣ ನಾಯ್ಕ ಗರಡಿ ಉಪಸ್ಥಿತರಿದ್ದರು.ಪಂಚಶ್ರೀ ಭಜನಾ ಮಂಡಳಿ, ಪಂಬೆತ್ತಾಡಿ,ಶ್ರೀ ಶಾರದಾಂಬಾ ಭಜನಾ ಮಂಡಳಿ,ಪಂಜ, ಶ್ರೀ ಪಂಚಲಿಂಗೇಶ್ವರ ಮಕ್ಕಳ ಭಜನಾ ತಂಡ, ನಾಗತೀರ್ಥ ಶ್ರೀ ಶಂಕರನಾರಾಯಣ ಭಜನಾ ಮಂಡಳಿ, ಕೂತ್ಕುಂಜ,ಭಾವನಾ ಬಳಗ, ಪಂಜ,ಶ್ರೀ ಕೃಷ್ಣ ಭಜನಾ ಮಂಡಳಿ,ಅಡ್ಡಬೈಲು, ಶ್ರೀ ಧರ್ಮ ಶಾಸ್ತವು ಭಜನಾ ಮಂಡಳಿ ಬಳ್ಪ,ಶ್ರೀ ವಿಷ್ಣು ಭಜನಾ ಮಂಡಳಿ, ಅಳ್ಪೆ ಚಿಂಗಾಣಿಗುಡ್ಡೆ, ಶ್ರೀ ಸಾಕ್ಷಾತ್ ಶಿವ ಭಜನಾ ಮಂಡಳಿ ಚಾರ್ವಕ,ಶಿವಳ್ಳಿ ಸಂಪದ, ಪಂಜ,ವನಿತಾ ಸಮಾಜ ಪಂಜಹೀಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ಹಮ್ಮಿಕೊಳ್ಳಲಾಗಿದೆ.

ಶಿವರಾತ್ರಿ ಪ್ರಯುಕ್ತ ದೇವಳದಲ್ಲಿ ಏಕದಶ ರುದ್ರಾಭಿಷೇಕ,ಬಿಲ್ವಾರ್ಚನೆ, ರುದ್ರ ಪಾರಾಯಣ,ರಾತ್ರಿ 10ಕ್ಕೆಮಹಾಪೂಜೆ ನಡೆಯಲಿದೆ.ಸೇವೆಗಳಾಗಿ ಮಧ್ಯಾಹ್ನ ಸರ್ವಸೇವೆ,ಶಿವಪೂಜೆ,ಮಹಾಪೂಜೆ,ಬಿಲ್ವಾರ್ಚನೆ, ರುದ್ರಾಭಿಷೇಕ, ರಾತ್ರಿ ಶಿವಪೂಜೆ,ಮಹಾಪೂಜೆ
ಬಿಲ್ವಾರ್ಚನೆ,ರುದ್ರಾಭಿಷೇಕ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ತಿಳಿಸಿದ್ದಾರೆ.




