ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಫೆ. 1ರಿಂದ 9ರ ತನಕ ವೈಭವದಿಂದ ನಡೆಯಲಿದೆ. ಪ್ರತಿ ದಿನ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮೆಯ ಭಕ್ತಾಧಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಬೇಕಾಗಿ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಫೆ. 1ರಂದು ದೇಗುಲದಲ್ಲಿ ಪೂರ್ವಾಹ್ನ 7.30ರಿಂದ ಶ್ರೀ ಗಣಪತಿ ಹವನ ,ಶ್ರೀ ರುದ್ರ ಹವನ ಮತ್ತು
ವೇದಪಾರಾಯಣಗಳ ಆರಂಭ ಪೂರ್ವಾಹ್ನ 10.30ರಿಂದ ಗರಡಿ ಬೈಲ್ ಮೂಲ ನಾಗನ ಕಟ್ಟೆಯಲ್ಲಿ ಆಶ್ಲೇಷ ಬಲಿ ಪೂಜೆ ಮತ್ತು ನಾಗ ತಂಬಿಲ ಸೇವೆ ಸಂಜೆ 6ಕ್ಕೆ ಕ್ಷೇತ್ರ ತಂತ್ರಿಗಳ ಆಗಮನ ಸಂಜೆ 7 ರಿಂದ ಧ್ವಜಾರೋಹಣ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ
ಸಂಜೆ 6-00ರಿಂದ 7-00ರ ವರೆಗೆ ‘ನೃತ್ಯಾರ್ಪಣ’ ವಿದುಷಿ ಮಾನಸ ಪುನೀತ್ ರೈ ನಿರ್ದೇಶನದಲ್ಲಿ ವಿಶ್ವಮೋಹನ ನೃತ್ಯ ಕಲಾ ಶಾಲೆ ಕಡಬ ಇವರಿಂದ.ಸಂಜೆ 7-30ರಿಂದ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಜೀವನ್ ಬೆಳ್ಳಾರೆ ನಿರ್ದೇಶನದಲ್ಲಿ
‘ನೃತ್ಯ ಸಂಭ್ರಮ’ಡ್ಯಾನ್ಸ್ ಆಂಡ್ ಬೀಟ್ಸ್ ಪಂಜ, ಬೆಳ್ಳಾರೆ, ಕೈಕಂಬ ಹಾಗೂ ಸುಬ್ರಹ್ಮಣ್ಯ ಶಾಖೆಯ ವಿದ್ಯಾರ್ಥಿಗಳಿಂದ. ಸಂಜೆ 7ರ ಬಳಿಕ ರಥಬೀದಿಯಲ್ಲಿ ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ತು ಮಂಗಳೂರು ಇವರಿಂದ ‘ಯಕ್ಷಗಾನ ಬಯಲಾಟ –
ಪ್ರಸಂಗ-ರಂಗಪ್ರವೇಶ.

ಫೆ.2ರಂದು ಪೂ.7ಕ್ಕೆ ನಾಗತೀರ್ಥದ ಮೂಲಸ್ಥಾನ ಬಂಟಮಲೆಯಿಂದ ದೇವಾಲಯಕ್ಕೆ ತೀರ್ಥ ತರುವುದು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾತ್ರಿ 7.30ರಿಂದ ನೃತ್ಯ ವೈಭವ ನಡೆಯಲಿದೆ.
ಫೆ.3ರಂದು ಪೂರ್ವಾಹ್ನದಿಂದ ಹಸಿರು ಕಾಣಿಕೆ ಸಂಗ್ರಹಣೆ ಮಾಡಿ ಸಂಜೆ 4ಕ್ಕೆ ಚೆಂಡೆ, ವಾದ್ಯ, ಮೇಳಗಳ ವೈಭವದ ಮೆರವಣಿಗೆಯ ಮೂಲಕ ದೇಗುಲಕ್ಕೆ ಸಮರ್ಪಣೆ ಮಾಡಿ ಉಗ್ರಾಣ ತುಂಬಿಸುವುದು.
ರಾತ್ರಿ ದಂಡ ಮಾಲೆಹಾಕಿ ಶ್ರೀ ದೇವರ ಬಲಿ ಹೊರಡುವುದು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ 7.30ರಿಂದ ಭರತ ನಾಟ್ಯ
ಫೆ.4ರಂದು ಮಂಗಳವಾರ ನಿತ್ಯ ಬಲಿ.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ
ಸಂಜೆ 7.30ರಿಂದ ಭಕ್ತಿ ಸಂಗೀತ.8.30ರಿಂದ ಸ್ಯಾಕ್ಸಪೋನ್ ವಾದನ
ಫೆ.5ರಂದು ಬುಧವಾರ ಬೆಳಿಗ್ಗೆ 10.30 ರಿಂದ ದರ್ಶನ ಬಲಿ, ಬಟ್ಟಲು ಕಾಣಿಕೆ ರಾತ್ರಿ ದೀಪೋತ್ಸವ, ದೈವಗಳ ನರ್ತನ ಸೇವೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ 7ರಿಂದ ಭಕ್ತಿ ಸಂಗೀತ
ರಾತ್ರಿ 8ರಿಂದ ನೃತ್ಯ ಸಂಭ್ರಮ ಸಂಜೆ 7 ರಿಂದ ಯಕ್ಷಗಾನ ಬಯಲಾಟ ಕೋಟಿ-ಚೆನ್ನಯ ಗರಡಿ ಮೈದಾನದಲ್ಲಿ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ
ಯಕ್ಷಗಾನ ಬಯಲಾಟ ‘ಪ್ರಚಂಡ ವಿಶ್ವಾಮಿತ್ರ ರಕ್ತರಾತ್ರಿ’

ಫೆ.6ರಂದು ರಾತ್ರಿ 8ಕ್ಕೆ ಬಲಿ ಹೊರಡುವುದು.ರಾತ್ರಿ 11 ರಿಂದ ಬ್ರಹ್ಮರಥೋತ್ಸವ ಕಾಚುಕುಜುಂಬ ದೈವಗಳ ನರ್ತನ ಸೇವೆ.
ಫೆ.7ರಂದು ಮುಂಜಾನೆ 6ಕ್ಕೆ ಕವಾಟೊದ್ಘಾಟನೆ ದೇವರಿಗೆ ಅಭಿಷೇಕ ಕಾಚುಕುಜುಂಬ ದೈವ ನರ್ತನ ಸೇವೆಯೊಂದಿಗೆ ಶ್ರೀ ದೇವರ ಅವಭೃತ ಸ್ಥಾನ ಧ್ವಜಾವರೋಹಣ.
ಸಂಜೆ 4ಕ್ಕೆ ದೇಗುಲದಿಂದ ಶ್ರೀ ಕಾಚುಕುಜುಂಬ ಉಳ್ಳಾಕುಲು ದೈವಗಳ ಭಂಡಾರ ಮೂಲಸ್ಥಾನ ಗರಡಿ ಬಯಲಿಗೆ ಹೋಗಿ ಧ್ವಜಾರೋಹಣ ಶ್ರೀ ಕಾಚುಕುಜುಂಬ ದೈವದ ನೇಮೋತ್ಸವ ಫೆ.8ರಂದು ಮುಂಜಾನೆ 7ರಿಂದ ಮೂಲಸ್ಥಾನ ಗರಡಿಯಲ್ಲಿ ಶ್ರೀ ಉಳ್ಳಾಕುಲು ದೈವದ ನೇಮ ಧ್ವಜಾವರೋಣ.ದೇವಳದಲ್ಲಿ ಸಂಪ್ರೋಕ್ಷಣೆ ವೈದಿಕ ಮಂತ್ರಾಕ್ಷತೆ. ಫೆ.9ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ , ಶಿರಾಡಿ ದೈವ ಹಾಗೂ ರುದ್ರ ಚಾಮುಂಡಿ ದೈವಗಳ ನೇಮೋತ್ಸವ ನಡೆಯಲಿದೆ.
ಫೆ.1ರಿಂದ 5ರ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗು ದಿನಾಂಕ 1 ರಿಂದ5 ರ ವರೆಗೆ ಸಂಜೆ ಭಜನಾ ಸಂಕೀರ್ತನೆ ಜರುಗಲಿವೆ. ಫೆ.6 ರಂದು ರಥಬೀದಿಯಲ್ಲಿ ಕುಣಿತ ಭಜನೆ ನಡೆಯಲಿದೆ ಎಂದು ಡಾ.ದೇವಿಪ್ರಸಾದ್ ಕಾನತ್ತೂರ್ ತಿಳಿಸಿದ್ದಾರೆ.

ಡಾ.ದೇವಿಪ್ರಸಾದ್ ಕಾನತ್ತೂರ್.
‘ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ನಡೆಯುವ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಗೂ ನೇಮೋತ್ಸವಕ್ಕೆ ಸೀಮೆಯ ಭಕ್ತಾಧಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ
ಡಾ.ದೇವಿಪ್ರಸಾದ್ ಕಾನತ್ತೂರ್.
ಅಧ್ಯಕ್ಷರು.
ವ್ಯವಸ್ಥಾಪನ ಸಮಿತಿ