ಬೆಂಗಳೂರು:ಹಲವಾರು ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆಯನ್ನು ನೀಡುತ್ತಿರುವ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ಬೆಂಗಳೂರಿನ ವೈಟ್ ಫೀಲ್ಡ್ ವ್ಯಾಪ್ತಿಯಲ್ಲಿರುವ ‘ಹೋಲಿ ಕ್ರಾಸ್’ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯ ಸುಮಾರು 225 ರಷ್ಟು ವಿದ್ಯಾರ್ಥಿಗಳಿಗೆ ಪರೀಕ್ಷಾ ದೃಷ್ಟಿಯಿಂದ

“ಕಠಿಣ ಪರಿಶ್ರಮದಿಂದ ಯಶಸ್ಸು”ಮತ್ತು ‘ಪರೀಕ್ಷೆಗಳನ್ನು ಎದುರಿಸುವ ಬಗ್ಗೆ’ ಎಂಬ ವಿಷಯದಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಲಿ ಕ್ರಾಸ್ ನ ಪ್ರಾಂಶುಪಾಲರಾದ ಮುಂದ್ರು ಬಾಲಸ್ವಾಮಿ ವಹಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಸಜ್ಜನ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆ ಮತ್ತು ಫಾರ್ಮೆಡ್ ಲಿಮಿಟೆಡ್ ಕಂಪನಿಯ ತರಬೇತಿ ವಿಭಾಗದ ಸಹಾಯಕ ಉಪಾಧ್ಯಕ್ಷ ವಿಕ್ರಂ ಸಾಗರ್ ಸಕ್ಸೆನಾ ತರಬೇತಿ ನಡೆಸಿಕೊಟ್ಟರು.ಬೆಂಗಳೂರಿನ ಅರಾನೀಸ್ ಬಿಸಿನೆಸ್ ಸರ್ವಿಸ್ ಪ್ರವೇಟ್ ಲಿಮಿಟೆಡ್,ಇದರ ನಿರ್ದೇಶಕ ವಸಂತ್ ಕುಮಾರ್ ಕಮಿಲ ಕಾರ್ಯಕ್ರಮವನ್ನು ಸಂಘಟಿಸಿದ್ದರು. ಶಾಲಾ ಉಪ ಪ್ರಾಂಶುಪಾಲರಾದ ನಾಗರಾಜು ಹಾಗೂ ಶಿಕ್ಷಕವೃಂದದವರು ಉಪಸ್ಥಿತರಿದ್ದರು.