ಪಂಜ: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ
ಅಭಿವೃದ್ಧಿ ಹಿನ್ನಲೆಯಲ್ಲಿ ನಡೆಸಿದ ಪ್ರಶ್ನಾ ಚಿಂತನೆಯಲ್ಲಿ ಸೂಚಿಸಿದ ದೇಗುಲದ ಜೀರ್ಣೋದ್ಧಾರ ಕೆಲಸಗಳಿಗೆ ನ.18ರಂದು ಚಾಲನೆ ನೀಡಲಾಗುವುದು. ರಕ್ತೇಶ್ವರಿ ಕಟ್ಟೆ,ಗಣಪತಿ ಗುಡಿಯ ಎದುರು ಅಗಲೀಕರಣ, ಸೇವಕೌಂಟರ್ ಕೆಲಸ,ರಥದ ಶೆಡ್ ಕೆಲಸ ಹಾಗು
ಯಾಗ ಶಾಲೆ ಕೆಲಸಗಳ ಬಗ್ಗೆ ವಾಸ್ತ್ತು ಶಿಲ್ಪಿಗಳಾದ ಮುನಿಯಂಗಳ ಕೃಷ್ಣ ಪ್ರಸಾದ್ ಅವರಿಂದ ಮಾರ್ಗದರ್ಶನ ಪಡೆದು ಕ್ಷೇತ್ರ ತಾಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿಗಳ ಭೇಟಿ ಮಾಡಿ ನ.18 ಸೋಮವಾರ ಪೂರ್ವಾಹ್ನ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವರಲ್ಲಿ ಪ್ರಾರ್ಥನೆ ಮಾಡಿ ಕೆಲಸ ಪ್ರಾರಂಭಿಸುವುದಾಗಿ ನಿರ್ಣಯಿಸಲಾಯ್ತು ಹಾಗು ರಕ್ತೇಶ್ವರಿ ಪ್ರತಿಷ್ಟಾಪನೆ ದಿನಾಂಕ 16-1-25 ರಿಂದ 18-1-25 ರ ವರೆಗೆ ವೈದಿಕ ಕಾರ್ಯಕ್ರಮಗಳೊಂದಿಗೆ ಕ್ಷೇತ್ರ ತಂತ್ರಿಗಳಾದ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದದು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತುರ್ ತಿಳಿಸಿದ್ದಾರೆ