ಪಂಜ:ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ ಇದರ ಆಶ್ರಯದಲ್ಲಿ ವಲಯ ಅರಣ್ಯ ಅಧಿಕಾರಿಗಳಾಗಿ ಭಡ್ತಿಗೊಂಡ ಸಂತೋಷ್ ಕುಮಾರ್ ರೈ ಹಾಗೂ ಮತ್ತು ಶ್ರವಣ ಸ್ವರ ಪ್ರಶಸ್ತಿ ಪಡೆದ ಯಕ್ಷಗಾನ ಭಾಗವತರಾದ ರಚನಾ ಚಿದ್ಗಲ್ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮ
ಪಂಜ ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಕೇಂದ್ರ ಸಭಾಭವನದಲ್ಲಿ ನಡೆಯಿತು. ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ಪುತ್ಯ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಕಳ ಶ್ರೀ ಭುವನೇಂದ್ರ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ. ಪದ್ಮನಾಭ ಬಿಳಿಮಲೆ ಅಭಿನಂದನಾ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ
ಡಾ. ದೇವಿಪ್ರಸಾದ್ ಕಾನತ್ತೂರ್, ವಕೀಲರಾದ ದಿಲೀಪ್ ಬಾಬ್ಲುಬೆಟ್ಟು, ಪುತ್ತೂರು ತಾಲೂಕು ಯಕ್ಷಪಟ್ಲ ಸಂಚಾಲಕ ಪ್ರಶಾಂತ ರೈ ಪಲ್ಲೋಡಿ, ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ನಾಗಪ್ಪ ಗೌಡ ಪಂಜದಬೈಲು,ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಿತೇಶ್ ಪಂಜದಬೈಲು ಅತಿಥಿಗಳಾಗಿದ್ದರು. ಕೃಷ್ಣ ವೈಲಾಯ, ಪವನ್ ಪಲ್ಲತ್ತಡ್ಕ, ದೇವದಾಸ್ ರೈ ಕುಬಲಾಡಿ, ಗುರು ಪ್ರಸಾದ್ ತೋಟ, ಪುಷ್ಪಾ ಡಿ ಪ್ರಸಾದ್ ಕಾನತ್ತೂರು ಉಪಸ್ಥಿತರಿದ್ದರು. ಗಿರೀಶ್ ಗಡಿಕಲ್ಲು ಸ್ವಾಗತಿಸಿ, ಪರಮೇಶ್ವರ ಬಿಳಿಮಲೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಗುರುಪ್ರಸಾದ್ ತೋಟ ವಂದಿಸಿ, ತೀರ್ಥಾನಂದ ಕೊಡಂಕೇರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಶ್ರೀ ದುರ್ಗಾಪೂಜೆ
ನಡೆಯಿತು.





