ಪಂಜ: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನವರಾತ್ರಿ ಪೂಜೆ ಅ.3ರಿಂದ ಆರಂಭಗೊಂಡಿದೆ. ಅ. 12ರ ತನಕ ವೈಭವದ ಉತ್ಸವ ನಡೆಯಲಿದೆ. ಪ್ರತಿ ದಿನ ಸಂಜೆ 6 ರಿಂದ 7.45ರ ತನಕ ಭಜನಾ ಸಂಕೀರ್ತನೆ 8ರಿಂದ 8.30ರ ತನಕ

ಅಷ್ಟಾವಾದನ ಕಾರ್ಯಕ್ರಮ ನಡೆಯುತಿದೆ.ಅ.7ರಂದು ಪಂಚಶ್ರೀ ಭಜನಾ ಮಂಡಳಿ ಪಂಬೆತ್ತಾಡಿ ವತಿಯಿಂದ ಭಜನಾ ಸಂಕೀರ್ತನೆ, ಶ್ರೀ ರಾಮಚಂದ್ರ ಕಲ್ಮಡ್ಕ ಬಳಗದವರಿಂದ ಹಾರ್ಮೋನಿಯಮ್ ವಾದನ ನಡೆಯಿತು. ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಅ.8ರಂದು ಪಂಜ ಹವ್ಯಕ ವಲಯ ಮಹಿಳೆಯರಿಂದ ಭಜನಾ ಸಂಕೀರ್ತನೆ, ವಿದುಷಿ ಮಾನಸ ಪುನೀತ್ ರೈ ಅವರ ಶಿಷ್ಯೆ ಆದ್ಯಾ ಬಾಬ್ಲುಬೆಟ್ಟು ಮತ್ತು ಸ್ನೇಹ ಪಿ.ರಾವ್ ಅವರಿಂದ ಭರತ ನಾಟ್ಯ ನೃತ್ಯ ಕಾರ್ಯಕ್ರಮ ನಡೆಯಲಿದೆ.








