ಪಂಜ: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನವರಾತ್ರಿ ಪೂಜೆ ಅ.3ರಿಂದ ಆರಂಭಗೊಂಡಿದೆ.ಅ. 12ರ ತನಕ ನಡೆಯಲಿದೆ. ಪ್ರತಿ ದಿನ ಸಂಜೆ 6 ರಿಂದ 7.45ರ ತನಕ ಭಜನಾ ಸಂಕೀರ್ತನೆ 8ರಿಂದ 8.30ರ ತನಕ ಅಷ್ಟಾವಾದನ ಕಾರ್ಯಕ್ರಮ ನಡೆಯಲಿದೆ. ಅ.3ರಂದು ಪಂಚಲಿಂಗೇಶ್ವರ ಭಜನಾ ಮಂಡಳಿ ನಾಗತೀರ್ಥ ಅವರಿಂದ
ಭಜನಾ ಸಂಕೀರ್ತನೆ, ವೀಕ್ಷಿತ್ ಕುತ್ಯಾಳ ಅವರಿಂದ ಕೊಳಲು ವಾದನ ನಡೆಯಿತು.ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಅ.4ರಂದು ಶ್ರೀವಿಷ್ಣು ಭಜನಾ ಮಂಡಳಿ ಅಳ್ಪೆ ಚಿಂಗಾಣಿಗುಡ್ಡೆ ವತಿಯಿಂದ ಭಜನಾ ಸಂಕೀರ್ತನೆ, ರಾಧಾಕೃಷ್ಣ ಮೊಗ್ರ ಅವರಿಂದ ನಾಗಸ್ವರ, ಅ.5ರಂದು ಶಾರದಾಂಬ ಭಜನಾ ಮಂಡಳಿ ಪಂಜ ಇವರಿಂದ ಭಜನಾ ಸಂಕೀರ್ತನೆ, ಶ್ರೀ ಶಾರದಾಂಬ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಯಕ್ಷಗಾನ ಸೇವೆ, ಅ.6 ರಂದು ಶ್ರೀ ದುರ್ಗಾ ಭಜನಾ ಮಂಡಳಿ ಹಾಗೂ ಶ್ರೀ ದುರ್ಗಾ ಮಕ್ಕಳ ಭಜನಾ ಮಂಡಳಿ ಪೆರುವಾಜೆ ವತಿಯಿಂದ ಭಜನಾ ಸಂಕೀರ್ತನೆ ಹಾಗೂ ಜಲದುರ್ಗಾ ಮಕ್ಕಳ ಕುಣಿತ ಭಜನಾ ಮಂಡಳಿಯಿಂದ ಕುಣಿತ ಭಜನೆ ನಡೆಯಲಿದೆ.
ಅ.7ರಂದು ಪಂಚಶ್ರೀ ಭಜನಾ ಮಂಡಳಿ ಪಂಬೆತ್ತಾಡಿ ವತಿಯಿಂದ ಭಜನಾ ಸಂಕೀರ್ತನೆ, ಶ್ರೀ ರಾಮಚಂದ್ರ ಕಲ್ಮಡ್ಕ ಬಳಗದವರಿಂದ ಹಾರ್ಮೋನಿಯಮ್ ವಾದನ ನಡೆಯಲಿದೆ. ಅ.8ರಂದು ಪಂಜ ಹವ್ಯಕ ವಲಯ ಮಹಿಳೆಯರಿಂದ ಭಜನಾ ಸಂಕೀರ್ತನೆ, ವಿದುಷಿ ಮಾನಸ ಪುನೀತ್ ರೈ ಅವರ ಶಿಷ್ಯೆ ಆದ್ಯಾ ಬಾಬ್ಲುಬೆಟ್ಟು ಮತ್ತು ಸ್ನೇಹ ಪಿ.ರಾವ್ ಅವರಿಂದ ಭರತ ನಾಟ್ಯ ನೃತ್ಯ ಕಾರ್ಯಕ್ರಮ ನಡೆಯಲಿದೆ. ಅ.9ರಂದು ಉಳ್ಳಾಕುಲು ಕಲಾ ರಂಗ ಪಲ್ಲೋಡಿ ಅವರಿಂದ ಭಜನಾ ಸಂಕೀರ್ತನೆ, ಗಗನ್ ಪಂಜ ಬಳಗದವರಿಂದ ಚೆಂಡೆ, ಮದ್ದಳೆ ಸೇವೆ ನಡೆಯಲಿದೆ.
ಅ.10 ರಂದು ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಕೇನ್ಯ ಅವರಿಂದ ಭಜನಾ ಸಂಕೀರ್ತನೆ, ಪವನ್ ನರಿಯಂಗ ಕೇನ್ಯ ಇವರಿಂದ ತಬಲವಾದನ, ಅ.11ರಂದು ವನಿತಾ ಸಮಾಜ ಪಂಜ ಇವರಿಂದ ಭಜನಾ ಸಂಕೀರ್ತನೆ, ಹೇಮಸ್ವಾತಿ ಕುರಿಯಾಜೆ ಮತ್ತು ತಂಡದಿಂದಲ ಭರತನಾಟ್ಯ ಮತ್ತು ಯಕ್ಷಗಾನ ಭಾಗವತಿಕೆ, ಅ.12ರಂದು ಯುವ ಸ್ಪೂರ್ತಿ ಕಲ್ಮಡ್ಕ ವತಿಯಿಂದ ಭಜನಾ ಸಂಕೀರ್ತನೆ ಮತ್ತು ಚೈತ್ರಿಕಾ ಕೋಡಿಬೈಲು ಅವರಿಂರ ಸಂಗೀತ ಸೇವೆ ನಡೆಯಲಿದೆ.
ನವರಾತ್ರಿ ಪೂಜೆ ಪ್ರತಿ ದಿನ ರಾತ್ರಿ 8ಕ್ಕೆ ನಡೆಯಲಿದೆ. ಪ್ರತಿ ದಿನ ಅನ್ನ ಸಂತರ್ಪಣೆ ನಡೆಯಲಿದೆ. ಅ.11ರಂದು ಆಯುಧ ಪೂಜೆ ದಿನ ವಾಹನ ಪೂಜೆ ಪೂ.8ರಿಂದ 2.30ರ ತನಕ ಹಾಗೂ ಸಂಜೆ 5ರಿಂದ 9.30ರವರೆಗೆ ನಿರಂತರ ನಡೆಯಲಿದೆ. ಉಳಿದ ದಿನಗಳಲ್ಲಿ ಬೆಳಗ್ಗಿನ, ಮಧ್ಯಾಹ್ನ, ರಾತ್ರಿ ಪೂಜೆಯ ನಂತರ ನಡೆಯಲಿದೆ ಎಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.