ಪಂಜ:ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ನಾಗನಕಟ್ಟೆಗಳಲ್ಲಿ ಜು.29ರಂದು ಸಂಭ್ರಮದ ನಾಗರ ಪಂಚಮಿ ಆಚರಣೆ ನಡೆಯಿತು. ದೇಗುಲದ ಸಮೀಪದ ನಾಗನ ಕಟ್ಟೆಯಲ್ಲಿ ಪೂರ್ವಾಹ್ನ ಗಂಟೆ 9ರಿಂದ ಮತ್ತು

ಗರಡಿ ಬೈಲು ಮೂಲ ನಾಗನಕಟ್ಟೆಯಲ್ಲಿ ಪೂರ್ವಾಹ್ನ ಗಂಟೆ 11ರಿಂದ ಪೂಜೆ ನಡೆಯಿತು. ಆ ಪ್ರಯುಕ್ತ ತಂಬಿಲ ಸೇವೆ, ಕ್ಷೀರಾಭಿಷೇಕ , ಪಂಚಾಮೃತ ಅಭಿಷೇಕ, ಎಳನೀರು ಅಭಿಷೇಕ, ಹಣ್ಣುಕಾಯಿ ಸೇವೆಗಳು ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.






