ಪಂಜ:ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬಲಗೈಬಂಟ ಶ್ರೀ ಕಾಚುಕುಜುಂಬ ದೈವದ ನೇಮೋತ್ಸವ ನಡೆಯಿತು. ಪಂಬೆತ್ತಾಡಿ ಗ್ರಾಮದ ಗರಡಿಬೈಲಿನ ಮೂಲಸ್ಥಾನದಲ್ಲಿ
ಎರಡು ತಿಂಗಳ ಹಿಂದೆ ಶ್ರೀ ಕಾಚುಕುಚುಂಬ ದೈವಸ್ಥಾನದಲ್ಲಿ ಪುನಃಪ್ರತಿಷ್ಠೆ ನಡೆದ ಬಳಿಕ ಕಾಚುಕುಜುಂಬ ದೈವದ ನೇಮೋತ್ಸವ ನಡೆಯಿತು.ದೇಗುಲದ ಭಂಡಾರ ಮನೆಯಿಂದ ಶ್ರೀ ಉಳ್ಳಾಕುಲು ಮತ್ತು ಕಾಚುಕುಜುಂಬದ ಭಂಡಾರವನ್ನು ಮೂಲಸ್ಥಾನ ಗರಡಿಬೈಲಿಗೆ ಮೆರವಣಿಗೆಯಲ್ಲಿ ತಂದು, ಸಂಜೆ ಧ್ವಜಾರೋಹಣವಾಗಿ ಶ್ರೀ ಉಳ್ಳಾಕುಲು

ದೈವದ ನೇಮ, ರಾತ್ರಿ ಶ್ರೀ ಕಾಚುಕುಜುಂಬ ದೈವದ ನೇಮ, ಪ್ರಸಾದ ವಿತರಣೆ, ಧ್ವಜಾವರೋಹಣ ನಡೆಯಿತು. ಬಳಿಕ ಶ್ರೀ ಉಳ್ಳಾಕುಲು ಮತ್ತು ಕಾಚುಕುಜುಂಬ ದೈವದ ಭಂಡಾರವನ್ನು ಮೆರವಣಿಗೆಯಲ್ಲಿ ದೇಗುಲದ ಭಂಡಾರ ಮನೆಗೆ ತರಲಾಯಿತು.ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಫೆ.8ರಂದು

ಪೂರ್ವಾಹ್ನ ಮಹಾಪೂಜೆ, ಶ್ರೀ ದೇವಳದಲ್ಲಿ ಸಂಪ್ರೋಕ್ಷಣೆ. ಮಧ್ಯಾಹ್ನ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಪುತ್ಯದಿಂದ ಶಿರಾಡಿ ದೈವದ ಭಂಡಾರ ತರುವುದು ಹಾಗೂ ರುದ್ರಚಾಮುಂಡಿ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯುತು.







