ಪಂಜ:ಜೇಸಿಐ ಪಂಜ ಪಂಚಶ್ರೀ ಜೇಸಿ ಸಪ್ತಾಹ ಅ.13ರಂದು ಉದ್ಘಾಟನೆಗೊಂಡಿತು.ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವಠಾರದಲ್ಲಿ ಜೇಸಿ ಸಪ್ತಾಹ ಉದ್ಘಾಟನೆ ಮತ್ತು ಕೆಸರು ಗದ್ದೆ ಕ್ರೀಡಾಕೂಟ ಜರುಗಿತು. ಜೇಸಿ ವಲಯ ಉಪಾಧ್ಯಕ್ಷ ಅಭಿಷೇಕ್ ಜಿ ಎಮ್ ಸಪ್ತಾಹ ಉದ್ಘಾಟಿಸಿದರು.ಪಂಜ ಜೇಸಿಐ ಪಂಚಶ್ರೀ ಸಾಮಾಜಿಕ ಕೊಡುಗೆಗಳು
ಅನನ್ಯವಾದುದು ಎಂದು ಅವರು ಹೇಳಿದರು.ಮುಖ್ಯ ಅತಿಥಿಯಾಗಿದ್ದ ಪಂಜಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಮಾತನಾಡಿ
ದೇವಳಕ್ಕೆ ಜೇಸಿ ಪಂಜ ಪಂಚಶ್ರೀ ವತಿಯಿಂದ ಕೊಡ ಮಾಡಿರುವ ಕದಿರು ಗದ್ದೆಯಿಂದ ಸುಮಾರು 10 ಸಾವಿರಕ್ಕೂ ಮಿಕ್ಕಿ ಮನೆಗಳಿಗೆ, ಪುತ್ತೂರು, ಸುಳ್ಯ,ಕಡಬ ತಾಲೂಕಿನ ಅನೇಕ ದೇವಸ್ಥಾನಗಳಿಗೆ, ದೈವಸ್ಥಾನಗಳಿಗೆ ಕದಿರು ನೀಡಲು ಸಾಧ್ಯವಾಗಿದೆ, ನವಾನ್ನ ಭೋಜನಕ್ಕೂ ಇಲ್ಲಿಂದ ಭತ್ತ ಕೊಂಡೊಯ್ದಿದ್ದಾರೆ. ಜೇಸಿಐ ಪಂಜ ಪಂಚಶ್ರೀ ಮಾದರಿ ಸಂಘಟನೆಯಾಗಿದೆ ಎಂದರು.
ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಜೀವನ್ ಮಲ್ಕಜೆ ಸಭಾಧ್ಯಕ್ಷತೆ ವಹಿಸಿದ್ದರು.ಘಟಕದ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ನಿಕಟಪೂರ್ವಾಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ, ಕಾರ್ಯದರ್ಶಿ ಜೀವನ್ ಶೆಟ್ಟಿಗದ್ದೆ , ಸಪ್ತಾಹ ನಿರ್ದೇಶಕ ವಾಚಣ್ಣ ಕೆರೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಜಯರಾಮ ಕಲ್ಲಾಜೆ ವೇದಿಕೆಗೆ ಆಹ್ವಾನಿಸಿದರು. ಪವನ್ ಮೂಲೆಮನೆ ಜೇಸಿ ವಾಣಿ ನುಡಿದರು. ಜೀವನ್ ಮಲ್ಕಜೆ ಸ್ವಾಗತಿಸಿದರು.ದೇವಿಪ್ರಸಾದ್ ಜಾಕೆ ಪ್ರಾಸ್ತಾವಿಕ ಮಾತನಾಡಿದರು.ವಿಜೇಶ್ ಹಿರಿಯಡ್ಕ ಅತಿಥಿಯನ್ನು ಪರಿಚಯಿಸಿದರು. ಜೀವನ್ ಶೆಟ್ಟಿಗದ್ದೆ ವಂದಿಸಿದರು.ಬಳಿಕ ಕೆಸರು ಗದ್ದೆ ಕ್ರೀಡಾಕೂಟ, ಏರ್ ಗನ್ ಶೂಟಿಂಗ್ ಸ್ಪರ್ಧೆ ನಡೆಯಿತು. 19ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜೇಸಿ ಸಪ್ತಾಹ ನಡೆಯಲಿದೆ.