ಪಂಜ: ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಜ.24 ರಿಂದ ಫೆ.9 ತನಕ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ
ಜರಗಲಿರುವುದು. ನಡೆಯಲಿದೆ. ಜ.24ರಂದು ಮುಂಜಾನೆ ಗಂಟೆ 9 ರಿಂದ ಗೊನೆ ಮುಹೂರ್ತ ವಿವಿಧ ವೈಧಿಕ ಕಾರ್ಯಮಗಳೊಂದಿಗೆ
ನಡೆಯಲಿದೆ.ಫೆ.1 ರಂದು ರಾತ್ರಿ ಧ್ವಜಾರೋಹಣ , ಫೆ.5 ರಂದು ಹಗಲು ದರ್ಶನ ಬಲಿ, ಫೆ.6 ರಂದು ರಾತ್ರಿ ಬ್ರಹ್ಮರಥೋತ್ಸವ ನಡೆಯಲಿದೆ. ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ತಿಳಿಸಿದ್ದಾರೆ.
ಉತ್ಸವದ ವಿವರ:
24-01-2026 ಶನಿವಾರ:
ಪೂರ್ವಾಹ್ನ ಗಂಟೆ 9.00ರಿಂದ ಗೊನೆ ಕಡಿಯುವುದು.
01-02-2026 ಆದಿತ್ಯವಾರ :
ಪೂ. 9.00ರಿಂದ ವೇದ ಪಾರಾಯಣಗಳ ಆರಂಭ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ.
ಸಂಜೆ 6.00ಕ್ಕೆ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಸಂಜೆ 7.00ಕ್ಕೆ ಧ್ವಜಾರೋಹಣ, ಮಹಾಪೂಜೆ, ಅನ್ನಸಂತರ್ಪಣೆ.
02-02-2026 ಸೋಮವಾರ :
ಪೂರ್ವಾಹ್ನ ಗಂಟೆ 7.00ಕ್ಕೆ ನಾಗತೀರ್ಥದ ಮೂಲಸ್ಥಾನ ಬಂಟಮಲೆಯಿಂದ ಶ್ರೀ ದೇವಾಲಯಕ್ಕೆ ತೀರ್ಥ ತರುವುದು, ಪೂ.10ರಿಂದ ಶ್ರೀ ರುದ್ರ ಹವನ.
ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆ. ಸಂಜೆ ಗಂಟೆ 6.00ಕ್ಕೆ ಶ್ರೀ ರಕ್ತೇಶ್ವರಿ ದೈವದ ಸನ್ನಿಧಿಯಲ್ಲಿ ತಂಬಿಲ ಸೇವೆ ಹಾಗೂ ಭಂಡಾರ ತೆಗೆಯುವುದು.
ರಾತ್ರಿ 7-30ಕ್ಕೆ ದೇಗುಲದಲ್ಲಿ ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆ. ರಾತ್ರಿ 8-00ರಿಂದ ಶ್ರೀ ರಕ್ತೇಶ್ವರಿ ದೈವದ ನೇಮ.
03-02-2026 ಮಂಗಳವಾರ :
ಪೂ. ಗಂಟೆ 8.00ಕ್ಕೆ ಮಹಾಪೂಜೆ, ಪೂ. 8.30ರಿಂದ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ಹಸಿರು ಕಾಣಿಕೆಗಳನ್ನು ತರಲು ಹೊರಡುವುದು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ನಿತ್ಯಬಲಿ ಅನ್ನಸಂತರ್ಪಣೆ. ಸಂಜೆ 4.00ರಿಂದ ವಿವಿಧ ಊರುಗಳಿಂದ ಸಂಗ್ರಹಣೆ ಮಾಡಿದ ಹಸಿರು ಕಾಣಿಕೆಗಳನ್ನು ಮೆರವಣಿಗೆಯಲ್ಲಿ ಪುತ್ಯ ಸತ್ಯಕಟ್ಟೆಯಿಂದ ದೇವಳಕ್ಕೆ ತರುವುದು. ಸಂಜೆ 6.00ರಿಂದ ಉಗ್ರಾಣ ತುಂಬಿಸುವುದು. 7.30ಕ್ಕೆ ಮಹಾಪೂಜೆ ದಂಡಮಾಲೆ ಹಾಕಿ ಬಲಿ ಹೊರಡುವುದು, ಬೇತಾಳಗಳು ಇಳಿಯುವುದು, ಅನ್ನಸಂತರ್ಪಣೆ.
04-02-2026 ಬುಧವಾರ :
ಪೂ 8.00ಕ್ಕೆ ಮಹಾಪೂಜೆ, ಶ್ರೀ ದೇವರ ಉತ್ಸವ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಶ್ರೀ ದೇವರ ಉತ್ಸವ, ಅನ್ನಸಂತರ್ಪಣೆ, ರಾತ್ರಿ 7-30ಕ್ಕೆ ಮಹಾಪೂಜೆ, ಶ್ರೀ ದೇವರ ಉತ್ಸವ, ಅನ್ನಸಂತರ್ಪಣೆ
05-02-2026 ಗುರುವಾರ:
ಪೂ. 8.00ಕ್ಕೆ ಮಹಾಪೂಜೆ, ಶ್ರೀ ದೇವರ ಉತ್ಸವ 11.30ರಿಂದ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ದೀಪೋತ್ಸವ, ಮಹಾಪೂಜೆ, ಶ್ರೀ ದೇವರ ಉತ್ಸವ, ಬೀದಿಕಟ್ಟೆ ಪೂಜೆ, ಕಾಚುಕುಜುಂಬ, ಶಿರಾಡಿ, ರುದ್ರಚಾಮುಂಡಿ ದೈವಗಳ ನರ್ತನ ಸೇವೆ, ವಸಂತ ಕಟ್ಟೆಪೂಜೆ, ಶ್ರೀ ದೇವರ ಉತ್ಸವ, ಅನ್ನಸಂತರ್ಪಣೆ.
06-02-2026 ಶುಕ್ರವಾರ:
ಪೂ. 8.00ಕ್ಕೆ ಮಹಾಪೂಜೆ, ಶ್ರೀ ದೇವರ ಉತ್ಸವ, ಮಧ್ಯಾಹ್ನ 12-30ಕ್ಕೆ ಮಹಾಪೂಜೆ, ಶ್ರೀ ದೇವರ ಉತ್ಸವ, ಅನ್ನಸಂತರ್ಪಣೆ, ರಾತ್ರಿ 7.00ಕ್ಕೆ ಶ್ರೀ ದೇವರ ಉತ್ಸವ, ರಾತ್ರಿ 11-00ರಿಂದ ಬ್ರಹ್ಮ ರಥೋತ್ಸವ, ಕಾಚುಕುಜುಂಬ ದೈವದ ನರ್ತನ ಸೇವೆ, ಮಹಾಪೂಜೆ, ಶ್ರೀ ಭೂತಬಲಿ, ಶಯನೋತ್ಸವ, ಕವಾಟ ಬಂಧನ, ಅನ್ನಸಂತರ್ಪಣೆ.

07-02-2026 ಶನಿವಾರ:
ಮುಂಜಾನೆ ಗಂಟೆ 6-00ಕ್ಕೆ ಕವಾಟೋದ್ಘಾಟನೆ, ದೇವರಿಗೆ ಅಭಿಷೇಕ, ಮಹಾಪೂಜೆ ಪೂರ್ವಾಹ್ನ ಗಂಟೆ 8-00ಕ್ಕೆ ಗರಡಿಬೈಲು ಮೂಲನಾಗನಕಟ್ಟೆಯಲ್ಲಿ ತಂಬಿಲಸೇವೆ, ಪೂ. 9.00ರಿಂದ ಬಲಿ ಹೊರಟು, ಕಾಚುಕುಜುಂಬ ದೈವದ ನರ್ತನ ಸೇವೆಯೊಂದಿಗೆ ನಾಗತೀರ್ಥ ಜಳಕದ ಹೊಳೆಯಲ್ಲಿ ಶ್ರೀ ದೇವರ ಅವಭೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ, ಅನ್ನಸಂತರ್ಪಣೆ.
ಅಪರಾಹ್ನ 3-00ಕ್ಕೆ : ದೇಗುಲದ ಭಂಡಾರ ಮನೆಯಿಂದ ಶ್ರೀ ಉಳ್ಳಾಕುಲು ಮತ್ತು ಕಾಚುಕುಜುಂಬದ ಭಂಡಾರವನ್ನು ಮೂಲಸ್ಥಾನ ಗರಡಿಬೈಲಿಗೆ ಮೆರವಣಿಗೆಯಲ್ಲಿ ತರುವುದು, ಸಂಜೆ 5-00ಕ್ಕೆ : ಧ್ವಜಾರೋಹಣ, ಸಂಜೆ 6-00ರಿಂದ : ಶ್ರೀ ಉಳ್ಳಾಕುಲು ದೈವದ ನೇಮ, ಸಂಜೆ 7-30ಕ್ಕೆ : ಅನ್ನಸಂತರ್ಪಣೆ, ರಾತ್ರಿ 8-00ರಿಂದ : ಶ್ರೀ ಕಾಚುಕುಜುಂಬ ದೈವದ ನೇಮ, ಪ್ರಸಾದ ವಿತರಣೆ, ಧ್ವಜಾವರೋಹಣ, ಶ್ರೀ ಉಳ್ಳಾಕುಲು ಮತ್ತು ಕಾಚುಕುಜುಂಬ ದೈವದ ಭಂಡಾರವನ್ನು ಮೆರವಣಿಗೆಯಲ್ಲಿ ದೇಗುಲದ ಭಂಡಾರ ಮನೆಗೆ ತರುವುದು.
08-02-2026 ಆದಿತ್ಯವಾರ : ಪೂ. 8.00ಕ್ಕೆ ಮಹಾಪೂಜೆ, ಶ್ರೀ ದೇವಳದಲ್ಲಿ ಸಂಪ್ರೋಕ್ಷಣೆ. ಮಧ್ಯಾಹ್ನ 12-30ಕ್ಕೆ : ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 7-00ಕ್ಕೆ : ಪುತ್ಯದಿಂದ ಶಿರಾಡಿ ದೈವದ ಭಂಡಾರ ತರುವುದು ಹಾಗೂ ರುದ್ರಚಾಮುಂಡಿ ಭಂಡಾರ ತೆಗೆಯುವುದು.
09-02-2026 ಸೋಮವಾರ : ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ, ಶಿರಾಡಿ ದೈವ ಹಾಗೂ ರುದ್ರಚಾಮುಂಡಿ ದೈವಗಳ ನೇಮ, ಅನ್ನಸಂತರ್ಪಣೆ, ಶಿರಾಡಿ ದೈವದ ಭಂಡಾರ ಪುತ್ಯಕ್ಕೆ ತೆಗೆದುಕೊಂಡು ಹೋಗುವುದು.
01-02-2026 ರಿಂದ 07-02-2026ರ ತನಕ ಪ್ರತಿದಿನ ಸಂಜೆ ಭಜನೆ ನಡೆಯಲಿರುವುದು.
ಸಾಂಸ್ಕೃತಿಕ ಕಾರ್ಯಕ್ರಮಗಳು:
01-02-2026ನೇ ಆದಿತ್ಯವಾರ
6.00 ರಿಂದ ನೃತ್ಯ ವೈಭವ
ಸ್ಥಳ : ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನ
ರಾತ್ರಿ ಗಂಟೆ 9-00ರಿಂದ
ಸಸಿಹಿತ್ತು ಶ್ರೀ ಭಗವತೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಮಂಗಳೂರು ಇವರಿಂದ
ತುಳು ಯಕ್ಷಗಾನ ಬಯಲಾಟ
ಪ್ರಸಂಗ – ‘ನವರಸ ಭರಿತ ನೂತನ ಕಥಾ ಪ್ರಸಂಗ’
ಸ್ಥಳ : ರಥಬೀದಿ.
03-02-2026
ಸಂಜೆ 7.00 ರಿಂದ 9.00ರ ವರೆಗೆ
‘ಭರತ ನಾಟ್ಯ’
ಸ್ಥಳ : ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನ
04-02-2026
06.00ರಿಂದ
‘ಸಾಂಸ್ಕೃತಿಕ ವೈಭವ’
ಸ್ಥಳ : ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನ
05-02-2026ನೇ ಗುರುವಾರ
ಸಂಜೆ 7-00ರಿಂದ
‘ನೃತ್ಯ ಸಂಭ್ರಮ’
ಸ್ಥಳ : ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನ
ಸಂಜೆ 7 ರಿಂದ
‘ಯಕ್ಷಗಾನ ಬಯಲಾಟ’
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ (ರಿ.) ಇವರಿಂದ
ಸ್ಥಳ:ಕೋಟಿ-ಚೆನ್ನಯ ಗರಡಿ ಮೈದಾನ.











