ಸುಳ್ಯ:ತಾಳೆ ಬೆಳೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಾಳೆ ಬೆಳೆಗೆ ಕೃಷಿಕರಿಗೆ ಪ್ರೋತ್ಸಾಹ ಧನ ನೀಡಲಾಗುತಿದೆ. ಶಾಶ್ವತ ನೀರಿನ ವ್ಯವಸ್ಥೆಯಿರುವ ರೈತರು ಕೃಚಿ ಅಭಿವೃದ್ಧಿ ಪಡಿಸಬಹುದಾಗಿದ್ದು ಆಸಕ್ತ ರೈತರು ಆರ್ಟಿಸಿ, ಬ್ಯಾಂಕ್ ಖಾತೆ, ಆಧಾರ್ ಪ್ರತಿಯೊಂದಿಗೆ ಜು.6ರ ಮೊದಲು ಅರ್ಜಿ ಸಲ್ಲಿಸಬಹುದು ಎಂದು ಸುಳ್ಯ ತೋಟಗಾರಿಕಾ ಇಲಾಖೆಯ ಪ್ರಕಟಣೆ ತಿಳಿಸಿದೆ.
ತಾಳೆ ಪ್ರದೇಶ ವಿಸ್ತರಣೆಗೆ ತಾಳೆ ಸಸಿಗೆ ಹೆಕ್ಟೇರ್ಗೆ 20 ಸಾವಿರ ದಿಂದ
29,000 ಸಹಾಯಧನದಲಿ ಸಸಿಗಳನ್ನು ಉಚಿತವಾಗಿ ವಿತರಿಸಲಾಗುವುದು. ಪ್ರತಿ ಫಲಾನುಭವಿಗೆ ವಿಸ್ತೀರ್ಣದ ಮಿತಿ ಇರುವುದಿಲ್ಲ. ಪ್ರತಿ ಫಲಾನುಭವಿಗೆ ಮೊದಲ ನಾಲ್ಕು ವರ್ಷಗಳಿಗೆ ರಸಗೊಬ್ಬರ ಖರೀದಿಗಾಗಿ ರೂ. 5,250ರಂತೆ ಪ್ರತಿ ಹೆಕ್ಟೇರ್ ಗೆ ಸಹಾಯಧನ ನೀಡಲಾಗುವುದು. ತಾಳೆ ಬೆಳೆ ಬೇಸಾಯದ ಮೊದಲ 4 ವರ್ಷದ ಅವಧಿಯಲಿ. ರೈತರಿಗೆ ಆದಾಯ ಗಳಿಕೆಗೆ ವಾರ್ಷಿಕ ಅಥವಾ ದಿ ವಾರ್ಷಿಕ ಬೆಳೆಗಳಾದ ಬಾಳೆ, ಶುಂಠಿ, ಪಪ್ಪಾಯ, ತರಕಾರಿಗಳನ್ನು ಅಂತರ ಬೆಳೆಯಾಗಿ ಬೆಳೆದಲಿ.. ಪ್ರತೀ ಹೆಕ್ಟೇರ್ ಗೆ ರೂ. 5250 ರಂತೆ ಸಹಾಯಧನ ನೀಡಲಾಗುವುದು.
ಕನಿಷ್ಟ 2 ಹೆಕ್ಟೇರ್ ಪ್ರದೇಶದಲಿ ತಾಳೆ ಬೇಸಾಯ ಕೈಗೊಂಡಿರುವ ರೈತರ ಹೊಸದಾಗಿ ಪಂಪ್ ಸೆಟ್ ಖರೀದಿಗೆ ಸಾಮಾನ್ಯ ರೈತರಿಗೆ ಶೇ. 50 ರಿಂದ 8ಸಾವಿರ, ಎಸ್ಸಿ,ಎಸ್ಟಿ, ಸಣ್ಣ ರೈತರಿಗೆ 10 ಸಾವಿರ ಸಹಾಯ ಧನ ನೀಡಲಾಗುವುದು. ಕನಿಷ್ಠ 1 ಎಕ್ರೆ ಪ್ರದೇಶದಲಿ ಇಳುವರಿ ನೀಡುತ್ತಿರುವ ತಾಳೆ ತೋಟದಲಿ.ಕೊಳವೆ ಬಾವಿ ಹೊಸದಾಗಿ ಕೊರೆಯಲು ಶೇಕಡ 50 ರಂತೆ ಗರಿಷ್ಠ ರೂ 50,000 ಸಹಾಯಧನ ನೀಡಲಾಗುವುದು.
ಕನಿಷ್ಟ 1 ಎಕ್ರೆ ಪ್ರದೇಶದಲ್ಲಿ, ತಾಳೆ ತೋಟ ಅಭಿವೃದ್ಧಿ ಪಡಿಸಿ ಇಳುವರಿ ನೀಡುತ್ತಿರುವ ತೋಟಗಳಲ್ಲಿ up to 20 HP with ಟ್ರೋಲಿಗೆ ಶೇ.40 ರಂತೆ 1.60 ಲಕ್ಷ ರೂ, ಎಸ್ಸಿ ಎಸ್ಟಿ, ಮಹಿಳೆ ಸಣ್ಣ / ಅತೀ ಸಣ್ಣ ರೈತರಿಗೆ ಶೇಕಡ 50 ರಂತೆ ಗರಿಷ್ಟ 2.00 ಲಕ್ಷ ಸಹಾಯಧನ ನೀಡಲಾಗುವುದು, ತಾಳೆ ಹಣ್ಣುಗಳ ಗೊಂಚಲು ಹಾಗೂ ತಾಳೆ ಗರಿಗಳನ್ನು ಕತ್ತರಿಸಲು Motorised Chisel ಖರೀದಿಗೆ ರೂ. 15,000, ಚಾಫ್ ಕಟ್ಟರ್ ಗೆ ರೂ. 50,000 ದವರೆಗೆ ಸಹಾಯಧನ ನೀಡಲಾಗುವುದು ಎರೆಹುಳು ಘಟಕ ತಯಾರಿಕೆಗೆ, ನೀರು ಕೊಯ್ಲು ಘಟಕ ತಯಾರಿಕೆಗೆ ಸಹಾಯ ಧನ ನೀಡಲಾಗುವುದು
ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ಸಂಪರ್ಕಿಸುವಂತೆ ಕೋರಿದೆ.
ಭಾರತದ ಖಾದ್ಯ ತೈಲದ ವಾರ್ಷಿಕ ಬೇಡಿಕೆ 289.10 ಲಕ್ಷ ಟನ್ ಗಳಿದ್ದು, 2022-23 ನೇ ಸಾಲಿನಲ್ಲಿ. ಖಾದ್ಯ ತೈಲದ ಉತ್ಪಾದನೆ ಕೇವಲ 126.40 ಲಕ್ಷ ಟನ್ ಗಳಿದ್ದು, ಉಳಿದ ಖಾದ್ಯ ತೈಲದ ಬೇಡಿಕೆಯನ್ನು ಸರಿದೂಗಿಸಲು ಸುಮಾರು 1.38 ಲಕ್ಷ ಕೋಟಿ ಮೌಲ್ಯದ 164.7 ಲಕ್ಷ ಟನ್ ಖಾದ್ಯ ತೈಲವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ 2025-26 ನೇ ಸಾಲಿಗೆ ಅಂದಾಜು 28.00 ಮಿಲಿಯನ್ ಟನ್ ಗಳ ಖಾದ್ಯ ತೈಲಗಳ ಅವಶ್ಯಕತೆ ಇರುತ್ತದೆ, ಖಾದ್ಯ ತೈಲದ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲಿ ಖಾದ ತೈಲ ಉತ್ಪಾದನೆಯನ್ನು ಹೆಚ್ಚಿಸುವ ತಾಳೆ ಬೆಳೆ ಬೇಸಾಯವನ್ನು ಪ್ರೋತ್ಸಾಹಿಸುತ್ತಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.