ಚೆನ್ನೈ:ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಶುಕ್ರವಾರ ನಡೆಯಲಿರುವ ಏಕದಿನ ವಿಶ್ವಕಪ್ ಪಂದ್ಯ ಪಾಕ್ಗೆ ಮಾಡು ಇಲ್ಲವೇ ಮಡಿ ಎಂಬಂತೆ ಇದೆ. ಹ್ಯಾಟ್ರಿಕ್ ಸೋಲುಗಳ ನಂತರ ವಿಶ್ವಕಪ್ ಸೆಮಿ ಫೈನಲ್ ಸಾಧ್ಯತೆ ಉಳಿಸಲು ಪಾಕಿಸ್ತಾನ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ ಪಾಕ್ ಪಡೆ.ಈ ಪಂದ್ಯ ಸೇರಿ
ಪಾಕಿಸ್ತಾನಕ್ಕೆ 4 ಪಂದ್ಯ ಉಳಿದಿದ್ದು ಎಲ್ಲವೂ ನಿರ್ಣಾಯಕವೇ.
ನೆದರ್ಲೆಂಡ್ಸ್ ವಿರುದ್ಧದ ಆಘಾತಕಾರಿ ಸೋಲು ಬಿಟ್ಟರೆ, ಉಳಿದಂತೆ ದಕ್ಷಿಣ ಆಫ್ರಿಕಾ ಈ ಬಾರಿ ಬಲಿಷ್ಠವಾಗಿದೆ.
ಕ್ವಿಂಟನ್ ಡಿಕಾಕ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರು ಸರಾಗವಾಗಿ ರನ್ ಗಳಿಸುತ್ತಿದ್ದಾರೆ. ಕ್ವಿಂಟನ್ ಈಗಾಗಲೇ ಮೂರು ಶತಕಗಳನ್ನು ಹೊಡೆದಿದ್ದು, ಟೂರ್ನಿಯ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಜೊತೆಗೆ ಏಡನ್ ಮರ್ಕರಂ, ಡೇವಿಡ್ ಮಿಲ್ಲರ್ ಕೂಡ ಫಾರ್ಮ್ನಲ್ಲಿ ಇದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 2
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್