ಸುಳ್ಯ:ಮುಗ್ದ ಭಕ್ತಿಗೆ ದೇವರು ಒಲಿಯುತ್ತಾನೆಯೇ ಹೊರತು ತೋರಿಕೆಯ ಮತ್ತು ಆಡಂಬರದ ಭಕ್ತಿಗೆ ಅಲ್ಲ, ನಮ್ಮ ನಡುವೆ ತಾರತಮ್ಯ ಇಲ್ಲದ ಪ್ರೀತಿ, ವಿಶ್ವಾಸದ ಐಕ್ಯತೆಗೆ ದೇವರ ಅನುಗ್ರಹ ಇದ್ದೇ ಇರುತ್ತದೆ ಎಂದು ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. ಪೈಚಾರ್ ಶಾಂತಿನಗರ ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದ
ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಹಾಗೂ ಮುಷ್ಠಿ ಹಣ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ದೇವಾಲಯಗಳಿಗೆ ಬ್ರಹ್ಮಕಲಶೋತ್ಸವದ ಜೊತೆಗೆ
ಮನಸ್ಸಿಗೆ ಬ್ರಹ್ಮ ಕಲಶೋತ್ಸವ ಅಗಬೇಕು, ಭೇಧ ಭಾವ ಮರೆತು ಪ್ರೀತಿ,ವಿಶ್ವಾಸದಿಂದ ಬದುಕಬೇಕು, ಪ್ರಕೃತಿಯನ್ನೂ ಪ್ರೀತಿ ಮಾಡಿ ಎಂದು ಅವರು ಹೇಳಿದರು.

ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ತಾಲೂಕಿಗೆ ಶಕ್ತಿ ಕೊಡುವ ದೇವಿ ಶಕ್ತಿಯಾಗಲಿದೆ ಎಂದು ಆಶಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಂದರ ರಾವ್, ಕಾರ್ಯಾಧ್ಯಕ್ಷ ದೇವಿಪ್ರಸಾದ್,ಆಡಳಿತ ಸಮಿತಿ ಅಧ್ಯಕ್ಷ ವೇಣುಗೋಪಾಲ, ದೇವಸ್ಥಾನದ ಮೊಕ್ತೇಸರರಾದ ಸಂಜೀವ ಪೈಚಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ರಹ್ಮ ಕಲಶೋತ್ಸವ ಸಮಿತಿ ಸಂಚಾಲಕ ರಾಜೇಶ್ ಶೆಟ್ಟಿ ಮೇನಾಲ ಸ್ವಾಗತಿಸಿ,
ಆಡಳಿತ ಸಮಿತಿ ಅಧ್ಯಕ್ಷ ವೇಣುಗೋಪಾಲ ವಂದಿಸಿದರು. ಉದಯಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.
ಪ್ರಮುಖರಾದ ವೆಂಕಟ್ ವಳಲಂಬೆ, ಬಾಲಗೋಪಾಲ ಸೇರ್ಕಜೆ,ವಿನಯಕುಮಾರ್ ಕಂದಡ್ಕ,ಗೋಕುಲ್ ದಾಸ್,ಆನಂದ ಬೆಟ್ಟಂಪಾಡಿ,ಕುಸುಮಾಧರ ಎ.ಟಿ,ದಾಮೋದರ ಮಂಚಿ,ಮುಳಿಯ ಗೋವಿಂದ ಭಟ್, ಸಮಿತಿಯ ಉಪಾಧ್ಯಕ್ಷರಾದ ಚಿದಾನಂದ ವಿದ್ಯಾನಗರ, ಗೌತಮ್ ಸೇರ್ಕಜೆ, ಸಹ ಸಂಚಾಲಕ ನಾರಾಯಣ ಶಾಂತಿನಗರ, ಕೋಶಾಧಿಕಾರಿ ಕೇಶವ ಮಾಸ್ತರ್.ಸಿ.ಎ, ಸುಬೋದ್ ಶೆಟ್ಟಿ ಮೇನಾಲ,ಶಿವನಾಥ ರಾವ್,ಅನೂಪ್ ಕಮಲಾಕ್ಷ ಪೈ, ಶ್ರೀನಿವಾಸ ಮಾಸ್ತರ್,ಪ್ರವೀಣ್ ಜಯನಗರ, ಅಶೋಕ್ ಕೊಯಿಂಗೋಡಿ,ಸಂಜಯ್ ಕುಮಾರ್ ಪೈಚಾರ್, ಚಂದ್ರಶೇಖರ ಕೇರ್ಪಳ, ಮಧುಸೂಧನ
ಮತ್ತಿತರರು ಉಪಸ್ಥಿತರಿದ್ದರು.










