ಅಜ್ಜಾವರ:ದೀಪಾವಳಿ ಪ್ರಯುಕ್ತ ಫ್ರೆಂಡ್ಶಿಫ್ ಟ್ರೋಪಿ ಸೀಸನ್ -4 ಕ್ರಿಕೆಟ್ ಪಂದ್ಯಾಟ ಪಡ್ಡಂಬ್ಯೆಲು ಅಡ್ಕ ಮೈದಾನದಲ್ಲಿ ನಡೆಯಿತು. ಲೋಕೇಶ್ ಪಡ್ಡಂಬ್ಯೆಲ್ ನೇತೃತ್ವದ ಸಂಘಟನಾ ಸಮಿತಿ ವತಿಯಿಂದ ಪಂದ್ಯಾಟ ಆಯೋಜಿಸಲಾಯಿತು.ಐದು ತಂಡಗಳು ಭಾಗವಹಿಸಿದ ಓವರ್ ಆರ್ಮ್ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದ ಐದು ತಂಡಗಳಲ್ಲಿ ಸುಳ್ಯ ಮತ್ತು
ಮಡಿಕೇರಿ ಭಾಗದ ಒಬ್ಬೊಬ್ಬರು ಐಕಾನ್ ಆಟಗಾರರಿದ್ದರು. ವಿನಯ್ ನಾರಾಲು ಮಾಲೀಕತ್ವದ “ಶ್ರೀ ವಿಷ್ಣು ಕ್ರಿಕೆಟರ್ಸ್ ” ಚಾಂಪಿಯನ್ ತಂಡವಾದರೆ, ಬಾಲಕೃಷ್ಣ ಪಿ.ಜಿ ಪಡ್ಡಂಬ್ಯೆಲು ಮಾಲೀಕತ್ವದ “ಥಂಡರ್ ಸ್ಟ್ರೈಕರ್ಸ್” ರನ್ನರ್ ಅಪ್ ಟ್ರೋಪಿ ಪಡೆದುಕೊಂಡಿತು. ಅಶೋಕ್ ಪಡ್ಡಂಬ್ಯೆಲು ಮಾಲಕತ್ವದ ‘ಪವರ್ ಹಿಟರ್ಸ್’,ವಿಫುಲ್ ನೀರ್ಪಾಡಿ ಮಾಲಕತ್ವದ ‘ಡೆಕ್ಕನ್ ವಾರಿಯರ್ಸ್’ ಮತ್ತು ಪ್ರಜ್ವಲ್ ಮಾಲಕತ್ವದ ‘ದೀ ಕರ್ಲಪ್ಪಾಡಿ ಪ್ಯಾಂಥರ್ಸ್’ ತಂಡಗಳು ಭಾಗವಹಿಸಿದ್ದವು.
ಲೆಜೇಂಡ್ಸ್ ತಂಡಗಳಾಗಿ ಭಾಗವಹಿಸಿದ್ದ ರೂಪಾನಂದ ಕರ್ಲಪ್ಪಾಡಿಯವರ ತಂಡವು ಚಾಂಪಿಯನ್ ಹಾಗೂ ರಂಜನ್ ಪಡ್ಡಂಬ್ಯೆಲು ಮಾಲಕತ್ವದದ ತಂಡ ರನ್ನರ್ಸ್ ಪ್ರಶಸ್ತಿ ಪಡೆಯಿತು.ಮಹಿಳೆಯರಿಗೆ, ಮಕ್ಕಳಿಗೆ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆದವು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಶಾಸಕಿ ಭಾಗೀರಥಿ ಮುರುಳ್ಯ ಭಾಗವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ರವಿರಾಜ್ ಕರ್ಲಪ್ಪಾಡಿ, ದಿವ್ಯ ಜಯರಾಮ್ ಪಡ್ಡಂಬ್ಯೆಲು, ಯಂಗ್ ಬ್ರದರ್ಸ್ ಕ್ರೀಡಾ ಮತ್ತು ಕಲಾ ಸಂಘ ಪಡ್ಡಂಬ್ಯೆಲು ಇದರ ಅಧ್ಯಕ್ಷರಾದ ದೇವರಾಜ್ ಪಡ್ಡಂಬ್ಯೆಲು, ಪುರುಷೋತ್ತಮ ಕರ್ಲಪ್ಪಾಡಿ, ಪ್ರಥಮ ಟ್ರೋಪಿ ದಾನಿಗಳಾದ ಚಂದ್ರಕಲಾ ಇಂದ್ರನಾಥ ಕರ್ಲಪ್ಪಾಡಿ ದ್ವಿತೀಯ ಟ್ರೋಪಿ ದಾನಿಗಳಾದ ಯತೀಶ್ ಪಡ್ಡಂಬ್ಯೆಲು ಮತ್ತು ಐದು ತಂಡಗಳ ಮಾಲಕರುಗಳಾದ ಬಾಲಕೃಷ್ಣ ಪಡ್ಡಂಬ್ಯೆಲು, ವಿನಯ್ ನಾರಾಲು, ವಿಫುಲ್ ನೀರ್ಪಾಡಿ, ಅಶೋಕ್ ಪಡ್ಡಂಬ್ಯೆಲು ಮತ್ತು ಪ್ರಜ್ವಲ್ ಕರ್ಲಪ್ಪಾಡಿ ಉಪಸ್ಥಿತರಿದ್ದರು.
ದ್ಯೆಹಿಕ ಶಿಕ್ಷಕ ದೇವರಾಜ್ ಪಡ್ಡಂಬ್ಯೆಲು ಅವರನ್ನು ಸನ್ಮಾನಿಸಲಾಯಿತು. ಪಂದ್ಯಾಕೂಟದ ಯಶಸ್ವಿಗೆ ಸಹಕರಿಸಿದ ಪುರುಷೋತ್ತಮ ಕರ್ಲಪ್ಪಾಡಿ, ಜಯರಾಮ್ ಪಿ.ಎಸ್ ಪಡ್ಡಂಬ್ಯೆಲ್, ನಿಖಿಲ್ ಮಣಿಮನೆ, ಸುನಿಲ್ ಅರುಣಗುಂಜ ಇವರನ್ನು ಸಂಘಟನಾ ಸಮಿತಿ ಪರವಾಗಿ ಗೌರವಿಸಲಾಯಿತು.
ಸಮಿತಿ ಸದಸ್ಯರುಗಳಾದ ರೂಪಾನಂದ ಕರ್ಲಪ್ಪಾಡಿ, ಹೇಮನಾಥ್ ಪಡ್ಡಂಬ್ಯೆಲು, ಶರತ್ ನಾಂಗುಳಿ, ದಿನೇಶ್ ಪಡ್ಡಂಬ್ಯೆಲು, ಯತೀಶ್ ಪಡ್ಡಂಬ್ಯೆಲು, ವಿನೋದ್ ಪಡ್ಡಂಬ್ಯೆಲು ಉಪಸ್ಥಿತರಿದ್ದರು. ದಿನೇಶ್ ನಾಂಗುಳಿ ಸ್ವಾಗತಿಸಿ, ಲೋಕೇಶ್ ಪಡ್ಡಂಬ್ಯೆಲು ವಂದಿಸಿ, ಬಾಲಕೃಷ್ಣ ಪಡ್ಡಂಬ್ಯೆಲು ಕಾರ್ಯಕ್ರಮ ನಿರೂಪಿಸಿದರು.