ವಿಷ್ಣುಪುರ: ಕಡಬ ತಾಲೂಕಿನ ಪುಣ್ಚತ್ತಾರು ವಿಷ್ಣುಪುರ ಶ್ರೀ ವಿಷ್ಣು ಮೂರ್ತಿ ದೈವಸ್ಥಾನದಲ್ಲಿ 57ನೇ ವರ್ಷದ ಒತ್ತೆಕ್ಕೋಲವು ಏಪ್ರಿಲ್ 2,3,4 ರಂದು ಜರುಗಲಿದೆ. ಈ ಕುರಿತು ಪೂರ್ವಭಾವಿ ಸಭೆ ದೈವಸ್ಥಾನದ ಸಭಾಭವನದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ದೇವಿ ಪ್ರಸಾದ್ ಕಾನತ್ತೂರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ವೇದಿಕೆಯಲ್ಲಿ
ಮೊಕ್ತೆಶ್ವರರಾದ ವೆಂಕಟ್ರಮಣ ಆಚಾರ್ಯ, ಆಡಳಿತ ಮಂಡಳಿ ಉಪಾಧ್ಯಕ್ಷ ಶೇಷಪ್ಪ ಬೆದ್ರಂಗಳ, ಆಡಳಿತ ಮಂಡಳಿ ಸದಸ್ಯರಾದ ಕುಮಾರ್ ಆಚಾರ್ಯ ದೋಲ್ಪಾಡಿ, ಕಾರ್ಯದರ್ಶಿ ಮೋನಪ್ಪ ಬಂಡಾಜೆ ಉಪಸ್ಥಿತರಿದ್ದರು. ಸಭೆಯಲ್ಲಿ ಮೊಕ್ತೆಶ್ವರರಾದ ಜನಾರ್ದನ ಆಚಾರ್ಯ ಹಾಗೂ ಕೃಷ್ಣ ಆಚಾರ್ಯ,ಆಡಳಿತ ಮಂಡಳಿ ಸದಸ್ಯರಾದ ಭವಿಷ್, ಪ್ರಮೋದ್, ಮೋಹನ್, ರಾಜೇಶ್, ರಾಕೇಶ್ ವಿಷ್ಣುಪುರ ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತೂರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮೋನಪ್ಪ ಬಂಡಾಜೆ ವಂದಿಸಿದರು.






