ನವದೆಹಲಿ: ಇಸ್ರೇಲ್ನಿಂದ ಹೊರಟ 235 ಭಾರತೀಯರನ್ನು ಹೊತ್ತ ಎರಡನೇ ವಿಮಾನ ಇಂದು ಬೆಳಿಗ್ಗೆ ನವದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.ಶುಕ್ರವಾರ ರಾತ್ರಿ ಟೆಲ್ ಅವೀವ್ನಿಂದ
ಹೊರಟ ವಿಶೇಷ ವಿಮಾನವು ಇಂದು ಬೆಳಿಗ್ಗೆ ನವದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.
ಸ್ವದೇಶಕ್ಕೆ ಮರಳಿದ ಭಾರತೀಯರನ್ನು ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ಖಾತೆಯ ರಾಜ್ಯ ಸಚಿವ ರಾಜ್ಕುಮಾರ್ ರಂಜನ್ ಸಿಂಗ್ ಸ್ವಾಗತಿಸಿದರು.
ಈ ವೇಳೆ ಸ್ವದೇಶಕ್ಕೆ ಮರಳಿದ ಪ್ರಯಾಣಿಕರು, ಆಪರೇಷನ್ ಅಜಯ್ ಕಾರ್ಯಾಚರಣೆ ಹಮ್ಮಿಕೊಂಡಿರುವ ಭಾರತ ಸರ್ಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.