ತಿರುವನಂತಪುರಂ: ಕೇರಳ ಸರಕಾರದ ಓಣಂ ಬಂಪರ್ ಲಾಟರಿಯ ಮೊದಲ ಬಹುಮಾನ 25 ಕೋಟಿ ಬಹುಮಾನ ಲಭಿಸಿರುವುದು ತಮಿಳುನಾಡು ಮೂಲದವರಿಗೆ ಎಂದು ವರದಿಯಾಗಿದೆ. ಸೆ.20ರಂದು ನಡೆದ ಡ್ರಾದಲ್ಲಿ ಮೊದಲ ಬಹುಮಾನ 25 ಕೋಟಿ TE230662 ಎಂಬ ಸಂಖ್ಯೆಗೆ ಒಲಿದು ಬಂದಿದೆ. ತಮಿಳುನಾಡು ಮೂಲದ 4 ಮಂದಿ
ಗೆಳೆಯರು ಸೇರಿ ಪಾಲಕ್ಕಾಡ್ನ ವಾಳಯಾರ್ನಿಂದ ಖರೀದಿಸಿದ ಟಿಕೆಟ್ಗೆ ಪ್ರಥಮ ಬಹುಮಾನ ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಪ್ರಥಮ ಬಹುಮಾನ ಅದೃಷ್ಠ ಶಾಲಿಯ ಬಗ್ಗೆ ನಿನ್ನೆಯಿಂದಲೇ ತೀವ್ರ ಕುತೂಹಲ ಕೆರಳಿಸಿತು. ಇವರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರ ಬರಬೇಕಾಗಿದೆ. ಓಣಂ ಬಂಪರ್ ಲಾಟರಿಯ ಪ್ರಥಮ ಬಹುಮಾನ 25 ಕೋಟಿಯ ಬಹುಮಾನ ಬಂದಿರುವ ಟಿಕೆಟ್ನ್ನು ಕ್ಯಾಲಿಕಟ್ನ ಬಾವಾ ಏಜೆನ್ಸಿ ಸಬ್ ಏಜೆಂಟ್ ಮೂಲಕ ಪಾಲಕ್ಕಾಡ್ ಜಿಲ್ಲೆಯ ವಾಳಯಾರ್ನಲ್ಲಿ ಮಾರಾಟ ಮಾಡಿದ ಟಿಕೆಟ್ಗೆ ಪ್ರಥಮ ಬಹುಮಾನ ಬಂದಿದೆ. ಎರಡನೇ ಬಹುಮಾನ ತಲಾ ಒಂದು ಕೋಟಿ 20 ಮಂದಿಗೆ ಮೂರನೇ ಬಹುಮಾನ ತಲಾ 50 ಲಕ್ಷದಂತೆ 20 ಮಂದಿಗೆ ದೊರೆಯಲಿದೆ.









