ತಿರುವನಂತಪುರಂ: ಈ ಬಾರಿ ದಾಖಲೆಯ ಮಾರಾಟ ನಡೆದಿದ್ದ ಕೇರಳ ಸರಕಾರದ ಓಣಂ ಬಂಪರ್ ಲಾಟರಿಯ ಡ್ರಾ ಇಂದು ನಡೆಯಿತು.ಮೊದಲ ಬಹುಮಾನ 25 ಕೋಟಿ- TE230662 ಎಂಬ ಸಂಖ್ಯೆಯ ಟಿಕೆಟ್ಗೆ ಒಲಿದು ಬಂದಿದೆ. ಈ ಬಾರಿ ದಾಖಲೆಯ 75.76 ಲಕ್ಷ ಟಿಕೆಟ್ ಮಾರಾಟ ಆಗಿತ್ತು. 85 ಲಕ್ಷ ಟಿಕೆಟ್ ಮುದ್ರಿಸಲಾಗಿತ್ತು. ಎರಡನೇ ಬಹುಮಾನ ತಲಾ ಒಂದು ಕೋಟಿ 20 ಮಂದಿಗೆ ಮೂರನೇ ಬಹುಮಾನ ತಲಾ 50 ಲಕ್ಷದಂತೆ 20 ಮಂದಿಗೆ ದೊರೆಯಲಿದೆ. ಕೇರಳ ಮಾತ್ರವಲ್ಲದೆ ಕರ್ನಾಟಕ ಹಾಗೂ ವಿವಿಧ ರಾಜ್ಯಗಳ ಸಾವಿರಾರು ಮಂದಿ ಓಣಂ ಬಂಪರ್ ಲಾಟರಿ ಖರೀದಿಸುತ್ತಾರೆ.