ಪೋರ್ಚುಗಲ್:ವಿಶ್ವದ ಅತ್ಯಂತ ಹಿರಿಯ ವಯಸ್ಸಿನ ಶ್ವಾನ ಅಂತಾನೇ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ ಪೋರ್ಚುಗಲ್ನ ಬಾಬಿ ಎಂಬ ಹೆಸರಿನ ಶ್ವಾನ ತನ್ನ 31 ನೇ ವಯಸ್ಸಿನಲ್ಲಿ ಸಾವನ್ನಪ್ಪಿದೆ. ಬಾಬಿ 31 ವರ್ಷ, 165 ದಿನಗಳ ಕಾಲ ಬದುಕುವ ಮೂಲಕ ವಿಶ್ವದಲ್ಲಿ ಅತೀ ಹೆಚ್ಚು ಕಾಲ ಬದುಕಿದ ಶ್ವಾನ ಎಂಬ
ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಇದಕ್ಕೂ ಮೊದಲು ಆಸ್ಟ್ರೇಲಿಯಾದ ನಾಯಿಯೊಂದು 29 ವರ್ಷ, ಐದು ತಿಂಗಳ ಕಾಲ ಬದುಕುವ ಮೂಲಕ ದಾಖಲೆಯನ್ನು ಮಾಡಿತ್ತು.ಶ್ವಾನಗಳ ಜೀವಿತಾವಧಿ ಸರಾಸರಿ 12 ರಿಂದ 15 ವರ್ಷಗಳು. ಇದಕ್ಕಿಂತ ಹೆಚ್ಚು ವರ್ಷಗಳ ಕಾಲ ಶ್ವಾನಗಳು ಬದುಕುವಂತಹದ್ದು ತೀರಾ ವಿರಳ. ಆದರೆ ಪೋರ್ಚುಗಲ್ನ ಬಾಬಿ ಎಂಬ ಹೆಸರಿನ ಶ್ವಾನ ಬರೋಬ್ಬರಿ 31 ವರ್ಷಗಳ ಕಾಲ ಬದುಕುವ ಮೂಲಕ ಅತೀ ಹೆಚ್ಚು ಕಾಲ ಬದುಕಿದ ಶ್ವಾನ ಎಂಬ ವಿಶ್ವ ದಾಖಲೆಯನ್ನು ಮಾಡಿತ್ತು.





