ಹೈದರಾಬಾದ್:ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ನೆದರ್ಲೆಂಡ್ಸ್ ವಿರುದ್ಧ 99 ರನ್ ಅಂತರದ ಗೆಲುವು ಸಾಧಿಸಿತು.ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್, ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 322 ರನ್ ಕಲೆಹಾಕಿತು.
ಗುರಿ ಬೆನ್ನತ್ತಿದ ನೆದರ್ಲೆಂಡ್ಸ್ 46.3 ಓವರ್ಗಳಲ್ಲಿ 223 ರನ್ಗೆ ಆಲೌಟ್
ಆಯಿತು. ಅರ್ಧಶತಕ ಗಳಿಸಿದ ಕಾಲಿನ್ ಎಕರ್ಮನ್ (69) ಹೋರಾಟ ನಡೆಸಿದರೂ ತಮ್ಮ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.ನ್ಯೂಜಿಲೆಂಡ್ ಪರ ಬ್ಯಾಟಿಂಗ್ನಲ್ಲಿ ಗುಡುಗಿದ್ದ ಮಿಚೆಲ್ ಸ್ಯಾಂಟನರ್ (17 ಎಸೆತಗಳಲ್ಲಿ ಅಜೇಯ 37 ರನ್) ಬೌಲಿಂಗ್ನಲ್ಲೂ ಮಿಂಚಿದರು. ಅವರು 10 ಓವರ್ಗಳಲ್ಲಿ 59 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಮ್ಯಾಟ್ ಹೆನ್ರಿ ಮೂರು ವಿಕೆಟ್ ಕಿತ್ತರು. ರಚಿನ್ ರವೀಂದ್ರ ಒಂದು ವಿಕೆಟ್ ಕಿತ್ತರು. ಮೊದಲು ಬ್ಯಾಟ್ ಮಾಡಿದ ನ್ಯೂಝಿಲ್ಯಾಂಡ್
ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 322 ರನ್ ಕಲೆಹಾಕಿತು.
ವಿಲ್ ಯಂಗ್ (70), ರಚಿನ್ ರವೀಂದ್ರ (51) ಹಾಗೂ ನಾಯಕ ಟಾಮ್ ಲಥಾಮ್ (53) ಅರ್ಧಶತಕ ಸಿಡಿಸಿ ಮಿಂಚಿದರು. ಡೆರಿಲ್ ಮಿಚೆಲ್ (48) ಹಾಗೂ ಕೊನೆಯಲ್ಲಿ ಗುಡುಗಿದ ಮಿಚೆಲ್ ಸ್ಯಾಂಟನರ್ (ಅಜೇಯ 37) ಉಪಯುಕ್ತ ಕೊಡುಗೆ ನೀಡಿದರು.