ಸುಳ್ಯ:2024 ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ 75% ಗಿಂತ ಹೆಚ್ಚಿನ ಅಂಕವನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಎನ್.ಎಸ್.ಯು.ಐ ಸುಳ್ಯ ವಿಧಾನಸಭಾ ಕ್ಷೇತ್ರ ವತಿಯಿಂದ ಪ್ರತಿಭಾ ಪುರಸ್ಕಾರ ಸನ್ಮಾನ ಹಾಗು ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ಕಾರ್ಯಗಾರ ಕಾರ್ಯಕ್ರಮ ನಡೆಯಲಿದೆ. ವಿಧ್ಯಾರ್ಥಿಗಳು ಸುಳ್ಯ ವಿಧಾನಸಭಾ ಕ್ಷೇತ್ರದ
ವ್ಯಾಪ್ತಿಗೆ ಒಳಪಟ್ಟಿರಬೇಕು. ಅರ್ಜಿ ಸಲಿಸುವ ಕೊನೆಯ ದಿನಾಂಕ ಜೂನ್ 15 2024 ವಾಗಿರುತ್ತದೆ. ಕಾರ್ಯಕ್ರಮ ನಡೆಯುವ ದಿನಾಂಕವನ್ನು ಶೀಘ್ರದಲ್ಲಿಯೇ ತಿಳಿಸಲಾಗುವುದೆಂದು ಎನ್ಎಸ್ಯುಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಧನುಷ್ ಕುಕ್ಕೆಟ್ಟಿ ತಿಳಿಸಿದ್ದಾರೆ. ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು www.nsuisullia.site ಮೂಲಕ ಬರ್ತಿ ಮಾಡಬೇಕಾಗಿ ತಿಳಿಸಲಾಗಿದೆ.ಅಭಿಯಾನದ ಚಾಲನೆಯನ್ನು ಸುಳ್ಯ ಎನ್.ಎಸ್.ಯು.ಐ ಘಟಕದ ಅಧ್ಯಕ್ಷ ಧನುಷ್ ಕುಕ್ಕೇಟಿ ನೇತೃತ್ವದಲ್ಲಿ ಜೂಮ್ ಮೀಟಿಂಗ್ ಮೂಲಕ ಚಾಲನೆ ನೀಡಲಾಗಿದೆ. ಕೀರ್ತನ್ ಗೌಡ ಕೊಡಪಾಲ, ಆಶಿಕ್ ಅರಂತೋಡು, ಪವನ್ ಅಂಬೇಕಲ್ಲು, ರಿಯಾಜ್ ಸುಳ್ಯ, ಉಬೈಸ್ ಗೂನಡ್ಕ ತಾಲೂಕು ಪ್ರಧಾನ ಕಾರ್ಯದರ್ಶಿ ಆಸಿಫ್ ಬಾಳಿಲ, ಶಹಾಲ್ ಸುಳ್ಯ , ರಕ್ಷಿತ್ ಗೌಡ, ಸಂತೋಷ್ ಮತ್ತು ಇತರರ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು.







