ಸುಳ್ಯ: ಸುಳ್ಯದ ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ನ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಕೆವಿಜಿ ಪಾಲಿಟೆಕ್ನಿಕ್ನ ಎನ್.ಎಸ್.ಎಸ್ ಘಟಕ ಹಾಗೂ ಸ.ಉ.ಹಿ.ಪ್ರಾ ಶಾಲೆ ಕಾಂತಮಂಗಲ ಇದರ ಸಹಯೋಗದೊಂದಿಗೆ ಕಾಂತಮಂಗಲ ಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಕಾರ್ಯಕ್ರ ನಡೆಯಿತು.ಈ ಸಂದರ್ಭದಲ್ಲಿ ಸೇವಾ ಸಂಗಮದ ವತಿಯಿಂದ
ಮಾಡಲಾದ ವೈಯರಿಂಗ್ ಕಾರ್ಯವನ್ನು ಅತಿಥಿಗಳಿಂದ ಉದ್ಘಾಟಿಸಲಾಯಿತು. ಕೆವಿಜಿ ಪಾಲಿಟೆಕ್ನಿಕ್ನ ನಿವೃತ್ತ ಪ್ರಾಂಶುಪಾಲರು, ಗೌರವ ಸಲಹೆಗಾರರಾದ ಎನ್.ಆರ್ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ನಿತಿನ್ ಪ್ರಭು, ಡಾ. ವೀಣಾ ಪಾಲಚಂದ್ರ , ಸತ್ಯನಾರಾಯಣ ಪ್ರಸಾದ್, ಚಂದ್ರಶೇಖರ ಬಿಳಿನೆಲೆ, ಡಾ. ಅನುರಾಧ ಕುರುಂಜಿ, ಮನಮೋಹನ್ ಪುತ್ತಿಲ, ಪಾಲಚಂದ್ರ, ಸೇವಾ ಸಂಗಮದ ಪ್ರಧಾನ ಕಾರ್ಯದರ್ಶಿ ವಿಶ್ವಕಿರಣ್ ಭಾಗವಹಿಸಿದ್ದರು.

ಶಾಲಾ ಮುಖ್ಯೋಪಾಧ್ಯಾಯಿನಿ ಸ್ವರ್ಣಲತಾ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಸುಜಿತ್ ಎಂ. ಎಸ್. ವಂದಿಸಿದರು.ಕೆ.ವಿ.ಜಿ. ಪಾಲಿಟೆಕ್ನಿಕ್ನ ಎನ್. ಎಸ್. ಎಸ್. ಸ್ವಯಂ ಸೇವಕಿ ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸೇವಾ ಸಂಗಮದ ಪದಾಧಿಕಾರಿಗಳಾದ ಯಶವಂತ್ ಜಯನಗರ, ಸೌಜನ್ಯ ಕುತ್ಯಾಳ, ಸುಶಾಂತ್ ಅಜ್ಜಿಕಲ್ಲು, ಜೀವನ್ ರಾಜ್, ಭವ್ಯಶ್ರೀ, ಭವಿಷ್ಯತ್, ಲೋಹಿತ್ ರೆಂಜಳ, ಅಶ್ವಿತ್,ವೀಕ್ಷಿತ್, ಮನ್ವಿತ್ ಹಾಗೂ ಕೆವಿಜಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಊರ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.












