ಸುಳ್ಯ:ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಜಾನಪದ ಸೊಗಡನ್ನು ಉಣ ಬಡಿಸುವ ಉದ್ದೇಶದಿಂದ ಕೆಸರುಗದ್ದೆ ಆಟೋಟಗಳನ್ನು ಬೂಡು ಶ್ರೀ ಭಗವತಿ ಗದ್ದೆಯಲ್ಲಿ ಆಯೋಜಿಸಿತು. ಕಾಲೇಜಿನ ಟ್ರಸ್ಟಿ ಡಾ.ಜ್ಯೋತಿ ಆರ್ ಪ್ರಸಾದ್ ಅವರು ಸಾಂಪ್ರದಾಯಿಕ ರೀತಿಯಲ್ಲಿ ಚಾಲನೆನೀಡಿ, ಶಿಕ್ಷಣದ ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕ್ಕೊಳ್ಳುವುದರ ಜೊತೆಗೆ ಗ್ರಾಮೀಣ ಕ್ರೀಡೆಗಳನ್ನು
ಉಳಿಸಿ ಬೆಳೆಸುವಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಕಾಲೇಜಿನ ಟ್ರಸ್ಟಿ ಮೌರ್ಯ ಆರ್ ಪ್ರಸಾದ್ ಮಾತನಾಡಿ ಕೆಸರುಗದ್ದೆ ಕ್ರೀಡಾ ಕೂಟದ ಮಹತ್ವ ಈಗಿನ ತಲೆಮಾರಿಗೆ ಅತ್ಯಾವಶ್ಯಕ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗೌರವ ಉಪಸ್ಥಿತರಾಗಿ ಪನ್ನೆ ಬೀಡು ಶ್ರೀ ಭಗವತಿ ಕ್ಷೇತ್ರದ ಬಲ್ಲಾಳರ ಪ್ರತಿನಿಧಿ ಬೂಡು ರಾಧಾಕೃಷ್ಣ ರೈ ಮಾತನಾಡಿ ಗ್ರಾಮೀಣ ಕ್ರೀಡೆಗಳು ಬದುಕಿನಲ್ಲಿ ಯಾವ ರೀತಿಯ ಪಾತ್ರವನ್ನು ವಹಿಸುತ್ತವೆ ಎನ್ನುವುದನ್ನು ತಿಳಿಸಿದರು.

ಕೇರ್ಪಳ ಶ್ರೀ ಭಗವತಿ ಯುವ ಸೇವಾ ಸಂಘದ ಅಧ್ಯಕ್ಷ ಸುನಿಲ್ ಕೇರ್ಪಳ ಉಪಸ್ಥಿತರಿದ್ದರು. ಪ್ರಕೃತಿಯಲ್ಲಿ ಹಗ್ಗ ಜಗ್ಗಾಟ ,ವಾಲಿಬಾಲ್, ಡಾರ್ಜ್ ಬಾಲ್ ಜೊತೆಗೆ ಹಲವು ಸಾಂಪ್ರದಾಯಿಕ ಚುಟುಕು ಆಟಗಳ ಸ್ಪರ್ಧೆಯಿಂದ ಎವಿದ್ಯಾರ್ಥಿಗಳಲ್ಲಿ ಸಂತಸವು ಮನೆ ಮಾಡಿತು.ಕಾರ್ಯಕ್ರಮ ಆರಂಭದಲ್ಲಿ ವಿದ್ಯಾರ್ಥಿಗಳಿಂದ ಸಂಪ್ರದಾಯಿಕ ನೃತ್ಯ ಪ್ರದರ್ಶನವನ್ನು ಉಪನ್ಯಾಸಕಿಶ ಸುಸ್ಮಿತಾ ಜಾಕೆ ಅವರ ಮಾರ್ಗದರ್ಶನ ದಲ್ಲಿ ಮಾಡಲಾಯಿತು..
ಉಪನ್ಯಾಸಕಿ ಮಲ್ಲಿಕಾ ಎಂ ಎಲ್, ವಿದ್ಯಾರ್ಥಿಗಳಾದ ಅಮೂಲ್ಯ, ಜನನಿ, ರಕ್ಷಾ ನಿರೂಪಿಸಿದರು. ಕಾರ್ಯಕ್ರಮಕ್ಕೆ
ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ರೇಣುಕಾ ಪ್ರಸಾದ್ ಕೆ ವಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ, ಉಪಪ್ರಾಂಶುಪಾಲರಾದ ದೀಪಕ್ ವೈ ಆರ್ ಹಾಗೂ ಎಲ್ಲಾ ವಿದ್ಯಾರ್ಥಿಗಳು ಹಾಗೂ ಭೋದಕ ಭೋದಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





