ಸುಳ್ಯ: ಕೇರಳದಲ್ಲಿ ನಿಫಾ ರೋಗದ ಪ್ರಕರಣಗಳು ಪತ್ತೆಯಾಗಿರುವ ಹಿನ್ನಲೆಯಲ್ಲಿ ಕರ್ನಾಟಕ-ಕೇರಳ ಗಡಿ ಭಾಗದ ಮುರೂರು ಚೆಕ್ ಪೋಸ್ಟ್ನಲ್ಲಿ ತಪಾಸಣೆ ಬಿಗುಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಚೆಕ್ ಪೋಸ್ಟ್ನಲ್ಲಿ ಕೇರಳ ರಾಜ್ಯದಿಂದ ಬರುವ ವಾಹನಗಳನ್ನು
ನಿಲ್ಲಿಸಿ ಪ್ರಯಾಣಿಕರ ತಪಾಸಣೆ ನಡೆಸಲಾಗುತ್ತಿದೆ.
ಕೇರಳ ರಾಜ್ಯದ ಗಡಿ ಪ್ರದೇಶ ಮುರೂರಿನಲ್ಲಿ ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ನಂದಕುಮಾರ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ತಪಾಸಣೆ ನಡೆಸಲಾಗುತ್ತದೆ. ನಿಫಾ ಸ್ಕ್ರೀನಿಂಗ್ ನಡೆಸಿ, ಪ್ರಯಾಣದ ವಿವರಗಳನ್ನು ಪಡೆಯಲಾಗುತ್ತದೆ.