ಬುಲವಾಯೊ (ಜಿಂಬಾಬ್ವೆ): ಆತಿಥೇಯ ಜಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ದಾಖಲೆ ಜಯ ಗಳಿಸಿದ ನ್ಯೂಜಿಲೆಂಡ್, ಎರಡು ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.ಬುಲವಾಯೊದಲ್ಲಿ ನಡೆದ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 359 ರನ್ ಅಂತರದ ಜಯ ಸಾಧಿಸಿದ ನ್ಯೂಜಿಲೆಂಡ್, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೂರನೇ ಅತಿದೊಡ್ಡ ಗೆಲುವು ಗಳಿಸಿದ ದಾಖಲೆ ಬರೆಯಿತು.
ಟಾಸ್ ಗೆದ್ದು ಮೊದಲು
ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ, ಪ್ರಥಮ ಇನಿಂಗ್ಸ್ನಲ್ಲಿ ಕೇವಲ 125 ರನ್ಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿನ್ಯೂಜಿಲೆಂಡ್, ಡೆವೋನ್ ಕಾನ್ವೇ (153 ರನ್), ಹೆನ್ರಿ ನಿಕೋಲಸ್ (ಅಜೇಯ 150 ರನ್) ಹಾಗೂ ರಚಿನ್ ರವೀಂದ್ರ (ಅಜೇಯ 165 ರನ್) ಸಿಡಿಸಿದ ಅಮೋಘ ಶತಕಗಳ ಬಲದಿಂದ 3 ವಿಕೆಟ್ಗೆ 601 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.476 ರನ್ಗಳ ಭಾರಿ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಇಳಿದ ಜಿಂಬಾಬ್ವೆ, 117 ರನ್ಗೆ ಎರಡನೇ ಇನಿಂಗ್ಸ್ನಲ್ಲೂ ಸರ್ವಪತನ ಕಂಡಿತು.
ನ್ಯೂಜಿಲೆಂಡ್ ಪರ ಮೊದಲ ಇನಿಂಗ್ಸ್ನಲ್ಲಿ 4 ವಿಕೆಟ್ ಪಡೆದಿದ್ದ ಝಕೆರಿ ಫೌಕ್ಸ್, ಈ ಬಾರಿ ಐದು ವಿಕೆಟ್ ಗೊಂಚಲು ಸಾಧನೆ ಮಾಡಿದರು.ಇನಿಂಗ್ಸ್ ಹಾಗೂ 359 ರನ್ ಅಂತರದ ಜಯ ಸಾಧಿಸಿದ ನ್ಯೂಜಿಲೆಂಡ್, ದೀರ್ಘ ಮಾದರಿಯಲ್ಲಿ ಅತಿದೊಡ್ಡ ಜಯ ಸಾಧಿಸಿದ ತಂಡಗಳ ಸಾಲಿನಲ್ಲಿ ವೆಸ್ಟ್ ಇಂಡೀಸ್ ಪಡೆಯ 65 ವರ್ಷಗಳ ಹಿಂದಿನ ದಾಖಲೆಯನ್ನು ಮುರಿಯಿತು. ಇದು ಟೆಸ್ಟ್ನ ಅತೀ ದೊಡ್ಡ ಗೆಲುವು
ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ಗೆ ಇನಿಂಗ್ಸ್ ಹಾಗೂ 579 ರನ್ ಜಯ (1938),ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾಗೆ ಇನಿಂಗ್ಸ್ ಹಾಗೂ 360 ರನ್ ಜಯ (2002), ಜಿಂಬಾಬ್ವೆ ಎದುರು ನ್ಯೂಜಿಲೆಂಡ್ಗೆ ಇನಿಂಗ್ಸ್ ಹಾಗೂ 359 ರನ್ ಜಯ (2025)





