ಸುಳ್ಯ:ಸುಳ್ಯ ತಹಶೀಲ್ದಾರ್ ಆಗಿ ಜಿ.ಮಂಜುನಾಥ್ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಮಾಡಿದೆ. ಗ್ರೇಡ್ 2 ತಹಶೀಲ್ದಾರ್ ಜಿ.ಮಂಜುನಾಥ್ ಅವರನ್ನು ಸುಳ್ಯ ತಾಲೂಕು ಗ್ರೇಡ್ 1 ತಹಶೀಲ್ದಾರ್ ಆಗಿ ನೇಮಕ ಮಾಡಿ ಆದೇಶ ಮಾಡಲಾಗಿದೆ. ತುಮಕೂರು ಮೂಲದವರಾದ
ಜಿ.ಮಂಜುನಾಥ್ ಅವರು ಸ್ಥಳ ನಿರೀಕ್ಷಣೆಯಲ್ಲಿದ್ದರು. ಸುಳ್ಯ ತಹಶೀಲ್ದಾರ್ ಆಗಿದ್ದ ಜಿ.ಮಂಜುನಾಥ್ ಅವರಿಗೆ ಬೆಂಗಳೂರಿಗೆ ವರ್ಗಾವಣೆಯಾದ ಬಳಿಕ ಎಂ.ಮಂಜುನಾಥ್ ಅವರು ಸುಳ್ಯ ತಹಶೀಲ್ದಾರ್ ಆಗಿ ಕರ್ತವ್ಯದಲ್ಲಿದ್ದರು. ಇದೀಗ ಮತ್ತೊಬ್ವರು ಮಂಜುನಾಥ್ ಅವರನ್ನು ಸುಳ್ಯ ತಹಶೀಲ್ದಾರ್ ಆಗಿ ನೇಮಕ ಮಾಡಿದ್ದಾರೆ ಎಂದು ತಿಳಿದು ಬಂದಿದೆ.









