ನವದೆಹಲಿ:ಸಂಸತ್ತಿನ ವಿಶೇಷ ಅಧಿವೇಶನ ಸೋಮವಾರದಿಂದ ಆರಂಭವಾಗಿದೆ. ನಿನ್ನೆ ಹಳೆ ಕಟ್ಟಡದಲ್ಲಿ ಕಲಾಪ ಶುರುವಾಗಿದ್ದರೂ ಎರಡನೇ ದಿನದ ಕಲಾಪ ಹೊಸ ಭವನದಲ್ಲಿ ನಡೆಯಲಿದೆ.
ಇಂದು ನೂತನ ಸಂಸತ್ ಭವನದಲ್ಲಿ ಮೊದಲ ಅಧಿವೇಶನ
ನಡೆಯಲಿದ್ದು, ಮಂಗಳವಾರ ಮಧ್ಯಾಹ್ನ 2:15ಕ್ಕೆ ಕಟ್ಟಡದ ಮೇಲ್ಮನೆ ಚೇಂಬರ್ನಲ್ಲಿ ರಾಜ್ಯಸಭೆ ಸಮಾವೇಶಗೊಂಡರೆ, ಕೆಳಮನೆ ಕೊಠಡಿಯಲ್ಲಿ ಮಧ್ಯಾಹ್ನ 1:15 ಕ್ಕೆ ಲೋಕಸಭೆ ಕಲಾಪ ಆರಂಭವಾಗಲಿದೆ. ಇನ್ನು ಮುಂದೆ ಹೊಸ ಕಟ್ಟಡದಲ್ಲಿಯೇ ಸಂಸತ್ತಿನ ಚಟುವಟಿಕೆಗಳು ಮುಂದುವರಿಯಲಿವೆ.
ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಕಟ್ಟಡವನ್ನು ಉದ್ಘಾಟಿಸಿದರು.