ಬೆಳ್ಳಾರೆ: ಸುಳ್ಯ ತಾಲೂಕಿನ ಬೆಳ್ಳಾರೆಗೆ ನೂತನ 108 ಆಂಬುಲೆನ್ಸ್ ಬಂದಿದೆ. ಕಳೆದ 9 ವರ್ಷಗಳಿಂದ ಸೇವೆ ನೀಡುತ್ತಾ ಬಂದಿರುವ 108 ಆಂಬುಲೆನ್ಸ್ ಸೇವೆಗೆ ಇದೀಗ ಹೊಸ ಹಾಗೂ ಅತ್ಯಾಧುನಿಕ ವ್ಯವಸ್ಥೆ ಹಾಗೂ ಸೌಲಭ್ಯಗಳಿಂದ ಕೂಡಿದ ಆಂಬುಲೆನ್ಸ್ ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ. ಇದರಲ್ಲಿ
ಆಸ್ಪತ್ರೆ ಪೂರ್ವ ಚಿಕಿತ್ಸೆಯೊಂದಿಗೆ ರೋಗಿಗಳನ್ನು ಅತೀ ಶೀಘ್ರವಾಗಿ ಆಸ್ಪತ್ರೆಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆ ಒಳಗೊಂಡಿದೆ.ಬೆಳ್ಳಾರೆಯ ಆಸುಪಾಸಿನ ಎಲ್ಲಾ ಗ್ರಾಮದ ಸಾರ್ವಜನಿಕರಿಗೆ ಇದು ಸಹಕಾರಿಯಾಗಿದೆ.
ಯಾವುದೇ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ
ಉಚಿತ ಸೇವೆ ನೀಡುತ್ತಿರುವ ಈ ಆಂಬುಲೆನ್ಸ್ ಆಸ್ಪತ್ರೆ ಪೂರ್ವ ಚಿಕಿತ್ಸೆ ನೀಡಿ ರೋಗಿಗಳನ್ನು ವೇಗವಾಗಿ ಆಸ್ಪತ್ರೆ ಗೆ ಉಚಿತ ವಾಗಿ ತಲುಪಿಸುವ ವ್ಯವಸ್ಥೆ ಹೊಂದಿದೆ. ಆರೋಗ್ಯದ ಸಮಸ್ಯೆಯ ಯಾವುದೇ ತುರ್ತು ಸಂದರ್ಭದಲ್ಲಿ 108 ನಂಬರ್ಗೆ ಉಚಿತವಾಗಿ ಕರೆ ಮಾಡಿ ಸೇವೆ ಪಡೆಯಬಹುದು. ನುರಿತ ಸಿಬ್ಬಂದಿಗಳು ಹಾಗೂ ಚಾಲಕರನ್ನು ಹೊಂದಿರುವ 108 ಆಂಬುಲೆನ್ಸ್ ದಿನದ 24 ಗಂಟೆಯೂ ರಾತ್ರಿ ಹಾಗೂ ಹಗಲು ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದೆ .