ಸುಳ್ಯ:ಮುಕ್ಕೂರು ನೇಸರ ಯುವಕ ಮಂಡಲಕ್ಕೆ ಹತ್ತರ ಹರೆಯ.ಈ ಹಿನ್ನೆಲೆಯಲ್ಲಿ ಜ.10 ಮತ್ತು 11 ರಂದು ಮುಕ್ಕೂರು ಶಾಲಾ ವಠಾರದಲ್ಲಿ ದಶಪ್ರಣತಿ ಕಾರ್ಯಕ್ರಮ ಹಾಗೂ ಶಾಶ್ವತ ಯೋಜನೆಗಳ ಲೋಕಾರ್ಪಣೆಯು ನಡೆಯಲಿದೆ. ಇಂದು (ಜ.10) ಬೆಳಗ್ಗೆ 10ಕ್ಕೆ ಪ್ರಗತಿಪರ ಕೃಷಿಕರಾದ ಅನಿತಾ ಟಿ ಭಟ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮುಕ್ಕೂರು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಜಯಂತ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ನೇಸರ ದಶಪ್ರಣತಿ ಸಮಿತಿಯ
ಉಪಾಧ್ಯಕ್ಷರಾದ ಚಂದ್ರಹಾಸ ರೈ ಮುಕ್ಕೂರು, ಗ್ರಾ.ಪಂ.ಸದಸ್ಯೆ ಚಂದ್ರಾವತಿ ಇಟ್ರಾಡಿ ಉಪಸ್ಥಿತರಿರಲಿದ್ದಾರೆ. ಬೆಳಗ್ಗೆ 10.30 ಕ್ಕೆ ದಶಪ್ರಣತಿ ಪ್ರಯುಕ್ತ ಅಶಕ್ತ ಕುಟುಂಬಕ್ಕೆ ಕುಂಡಡ್ಕದಲ್ಲಿ ನಿರ್ಮಿಸಿದ ನೇಸರ ನಿಲಯದ ಹಸ್ತಾಂತರ ಕಾರ್ಯಕ್ರಮವನ್ನು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ನೆರವೇರಿಸಲಿದ್ದಾರೆ. ಅನಂತರ ನೇಸರ ದಶಪ್ರಣತಿ ಸಮಿತಿ ಉಪಾಧ್ಯಕ್ಷ ಸುಬ್ರಾಯ ಭಟ್ ನೀರ್ಕಜೆ ನೇಸರ ಸ್ವಂತಿಮೂಲೆ ಅನಾವರಣ ಮಾಡಲಿದ್ದಾರೆ. ಮುಕ್ಕೂರು ಅಂಗನವಾಡಿ ಉದ್ಯಾನವನದ ಪ್ರಥಮ ಹಂತದ ಕಾಮಗಾರಿಯನ್ನು ಪ್ರಗತಿಪರ ಕೃಷಿಕ ಗೋಪಾಲ ಸುವರ್ಣ ಬಿ.ಕೆ ಅವರು ಉದ್ಘಾಟಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಾಲು ಮರ ತಿಮ್ಮಕ್ಕ ಸ್ಮರಣಾರ್ಥ ಹತ್ತು ಗಿಡ ನೆಡುವಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಪ್ರಗತಿಪರ ಕೃಷಿಕರಾದ ಸಂಪತ್ ಕುಮಾರ್ ರೈ ಪಾತಾಜೆ, ಮೋಹನ ಬೈಪಾಡಿತ್ತಾಯ, ಸುಬ್ಬಣ್ಣದಾಸ್ ಚೆನ್ನಾವರ,
ಗ್ರಾ.ಪಂ. ಸದಸ್ಯೆ ಗುಲಾಬಿ ಬೊಮ್ಮೆಮಾರು, ಮುಕ್ಕೂರು ಶಾಲಾ ಮುಖ್ಯಗುರು ಲತಾ, ನಿವೃತ್ತ ಬ್ಯಾಂಕ್ ಉದ್ಯೋಗಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅರಸಿಕೆರೆ ತಾಲೂಕು ಮೇಲ್ವಿಚಾರಕ ಸೀತಾರಾಮ ಕಾನಾವು, ಉದ್ಯಮಿ ರಫೀಕ್ ಸವಣೂರು, ಧಾರ್ಮಿಕ ಪರಿಚಾರಕ ಕೃಷ್ಣಪ್ಪ ನಾಯ್ಕಅಡ್ಯತಕಂಡ, ಶಿವಪ್ರಕಾಶ್ ಆಚಾರ್ಯ ಅವರು ಗಿಡ ನೆಡಲಿದ್ದಾರೆ.
ಸಂಜೆ 5 ರಿಂದ ಪುಣ್ಚಪ್ಪಾಡಿ ಶಾಲಾ ವಿದ್ಯಾರ್ಥಿಗಳಿಂದ, ಮುಕ್ಕೂರು ಅಂಗನವಾಡಿ, ಶಾಲಾ ವಿದ್ಯಾರ್ಥಿಗಳಿಂದ, ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಪದಯಾನ ತಂಡದಿಂದ ಭರತನಾಟ್ಯ ನಾಟ್ಯಾಂಜಲಿ, ನೇಸರ ಯುವಕ ಮಂಡಲದ ಸದಸ್ಯರಿಂದ ಕಿರು ನಾಟಕ ದೇವರ ಆಟ ಪ್ರದರ್ಶನಗೊಳ್ಳಲಿದೆ.
ರಾತ್ರಿ 7.45 ಕ್ಕೆ ಸಭಾ ಕಾರ್ಯಕ್ರಮವನ್ನು ಪುತ್ತೂರು ಜಿ.ಎಲ್ ಆಚಾರ್ಯ ಜುವೆಲ್ಲರ್ಸ್ ನ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಉದ್ಘಾಟಿಸಲಿದ್ದಾರೆ.ನೇಸರ ದಶಪ್ರಣತಿ ಸಮಿತಿ-2026 ಅಧ್ಯಕ್ಷ ಡಾ.ನರಸಿಂಹ ಶರ್ಮ ಕಾನಾವು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನೇಸರ ದಶಪ್ರಣತಿ ಸಮಿತಿ ಗೌರವಾಧ್ಯಕ್ಷ ,ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ನೇಸರ ದಶಪ್ರಣತಿ ಸಮಿತಿ ಗೌರವಾಧ್ಯಕ್ಷ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ನೇಸರ ದಶಪ್ರಣತಿ ಸಮಿತಿ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಪೂಜಾರಿ ಮುಕ್ಕೂರು, ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಮೊಕ್ತೇಸರ ಉಮೇಶ್ ರಾವ್ ಕೊಂಡೆಪ್ಪಾಡಿ, ನೇಸರ ದಶಪ್ರಣತಿ ಸಮಿತಿ ಸಂಚಾಲಕ ಕುಂಬ್ರ ದಯಾಕರ ಆಳ್ವ, ಉದ್ಯಮಿ ಸಂತೋಷ್ ಕುಮಾರ್ ಅಲೆಕ್ಕಾಡಿ, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಪ್ರಗತಿಪರ ಕೃಷಿಕ ಯು.ಮಹಮ್ಮದ್ ಕುಂಜೂರು, ಮುಕ್ಕೂರು ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು ಉಪಸ್ಥಿತರಿರಲಿದ್ದಾರೆ.
ಜ.11:ಶಿವದೂತೆ ಗುಳಿಗ ನಾಟಕ:
ಜ.11 ರಂದು ಸಂಜೆ 6 ರಿಂದ ತುಳು ರಂಗಭೂಮಿಯಲ್ಲಿ ಸಂಚಲನ ಮೂಡಿಸಿದ ವಿಜಯ ಕುಮಾರ್ ಕೊಡಿಯಾಲ ಬೈಲು ನಿರ್ದೇಶನದ ಕಲಾ ಸಂಗಮ ಕಲಾವಿದರಿಂದ ಶಿವದೂತೆ ಗುಳಿಗೆ ನಾಟಕ ಪ್ರದರ್ಶನಗೊಳ್ಳಲಿದೆ. ರಾತ್ರಿ ದಶಪ್ರಣತಿ ಪ್ರಯುಕ್ತ ಹೊರತರಲಾದ ಅದೃಷ್ಟ ಚೀಟಿಯ ಡ್ರಾ ಅನ್ನು ನೇಸರ ದಶಪ್ರಣತಿ ಉಪಾಧ್ಯಕ್ಷ ನರಸಿಂಹ ತೇಜಸ್ವಿ ಅವರು ನೆರವೇರಿಸಲಿದ್ದಾರೆ. ಎರಡು ದಿನಗಳ ಕಾಲ ಅನ್ನಸಂತರ್ಪಣೆ ವ್ಯವಸ್ಥೆ ಇರಲಿದೆ ಎಂದು ದಶಪ್ರಣತಿ ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.












