ಸುಳ್ಯ:ಸ್ನೇಹ ಶಾಲೆಯಲ್ಲಿ ಭತ್ತದ ಗದ್ದೆಯನ್ನು ನಿರ್ಮಿಸಿ ಮಕ್ಕಳಿಗೆ ಭತ್ತವನ್ನು ಬೆಳೆದು ಅಕ್ಕಿಯನ್ನು ಪಡೆಯುವ ಪ್ರಾಯೋಗಿಕ ಶಿಕ್ಷಣ ನೀಡುತ್ತಿರುವುದು ಅನುಕರಣೀಯ ಕಾರ್ಯ ಎಂದು ಮಂಗಳೂರಿನ ರಾಮಕೃಷ್ಣಾಶ್ರಮದ ಆಡಳಿತಾಧಿಕಾರಿ ರಂಜನ್ ಸ್ವಾಮಿ ಹೇಳಿದರು. ಅವರು ಸ್ನೇಹ ಶಾಲೆಯಲ್ಲಿ
ನಡೆದ ಎರಡನೇ ವರ್ಷ ನೇಜಿ ನೆಡುವ ಕಾರ್ಯಕ್ರಮವನ್ನು ಗದ್ದೆಗೆ ಹಾಲೆರೆದು ಉದ್ಘಾಟಿಸಿದರು. ಸ್ನೇಹ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಸ್ವಾಗತಿಸಿದರು.ತೆನೆ ನೆಡುವಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು, ಪೋಷಕರು, ಶನಿತ್ಯಾನಂದ ಗುಂಡ್ಯ, ಆಡಳಿತ ಮಂಡಳಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ವಂದಿಸಿದುರು.





