ಸುಳ್ಯ: ಸುಳ್ಯದಲ್ಲಿ ಪ್ರಥಮ ಬಾರಿಗೆ ಪ್ರೊ ಮಾದರಿಯ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ ನ.17 ರಿಂದ 19ರ ತನಕ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿಯಲ್ಲಿರುವ ಪ್ರಭು ಮೈದಾನದಲ್ಲಿ ನಡೆಯಲಿದೆ. ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ 8ನೇ ವಾರ್ಷಿಕೋತ್ಸವದ ಅಂಗವಾಗಿ ಅಮೆಚೂರು ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ ಸಹಭಾಗಿತ್ವದಲ್ಲಿ ನಡೆಯುವ ಪಂದ್ಯಾಟಕ್ಕೆ ಚಪ್ಪರ ಮುಹೂರ್ತ
ಅ.20ರಂದು ನಡೆಯಿತು. ಹಿರಿಯರಾದ ಜಿ.ಜಿ.ನಾಯಕ್ ತೆಂಗಿನ ಕಾಯಿ ಒಡೆದು, ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಗೌರವಾಧ್ಯಕ್ಷ ಎಸ್.ಪಿ.ಲೋಕನಾಥ್ ದೀಪ ಬೆಳಗಿಸಿ ಚಪ್ಪರ ಮುಹೂರ್ತ ನೆರವೇರಿಸಿದರು.ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶಿವಪ್ರಕಾಶ್, ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿ ಅಧ್ಯಕ್ಷ ಸಂಶುದ್ದೀನ್ ಭಾರತ್ ಶಾಮಿಯಾನ, ಸಂಚಾಲಕ ಎನ್.ಎಸ್.ರಾಜೇಶ್ ಸುಬ್ರಹ್ಮಣ್ಯ, ಸಂಘದ ಪದಾಧಿಕಾರಿಗಳಾದ ಗುರುದತ್ ನಾಯಕ್, ಗಿರಿಧರ ಸ್ಕಂದ, ವೆಂಕಟ್ರಮಣ ಅರಂತೋಡು, ಜಿ.ಎ.ಮಹಮ್ಮದ್, ವೆಂಕಟ್ರಮಣ ಅರಂತೋಡು, ಸುನಿಲ್.ಎನ್.ಎಸ್ ಐವರ್ನಾಡು, ರಝಾಕ್ ಸ್ವಾಗತ್, ಶರತ್ ಅಲೆಕ್ಕಾಡಿ,ಹರೀಶ್ ರೈ ಉಬರಡ್ಕ,
ನಾರಾಯಣ ಮತ್ತಿತರರು ಭಾಗವಹಿಸಿದ್ದರು
3 ದಿನದ ಪಂದ್ಯಾಟ: 12 ಪುರುಷರ, 4 ಮಹಿಳಾ ತಂಡ ಭಾಗಿ:
ನ.17 ರಿಂದ 19ರ ತನಕ ನಡೆಯುವ
ರಾಷ್ಟ್ರೀಯ ಮಟ್ಟದ ಆಟಗಾರರನ್ನು ಒಳಗೊಂಡ ಆಹ್ವಾನಿತ ತಂಡಗಳ ಎ ಗ್ರೇಡ್ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ 12 ಪುರುಷರ ಹಾಗೂ 4 ಮಹಿಳಾ ತಂಡಗಳು ಭಾಗವಹಿಸಲಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಹರಿಯಾಣ, ದೆಹಲಿ, ರೈಲ್ವೇಸ್, ಮುಂಬೈ ತಾಣೆ, ಹರಿಯಾಣದ ಗುರ್ಗಾಂ,ತಮಿಳುನಾಡಿನ ಎರಡು ತಂಡಗಳು ಸೇರಿ 12 ಪುರುಷರ ತಂಡಗಳು ಭಾಗವಹಿಸಲಿದೆ. 4 ಮಹಿಳಾ ತಂಡಗಳು ಭಾಗವಹಿಸಲಿದೆ. ಪಂದ್ಯಾಟವು ಸಂಪೂರ್ಣ ಪ್ರೊ ಮಾದರಿಯಲ್ಲಿ ಲೀಗ್ ಪಂದ್ಯಾಟ ನಡೆಯಲಿದ್ದು. ಪ್ರೊ ಕಬಡ್ಟಿಯಲ್ಲಿನ ಎಲ್ಲಾ ಆಧುನಿಕ ತಂತ್ರಜ್ಞಾನವನ್ನು, ನಿಯಮಗಳನ್ನು ಅಳವಡಿಸಲಾಗುವುದು. ಪ್ರೊ ಕಬಡ್ಡಿ ತಂಡದ ಆಟಗಾರರು, ರಾಷ್ಟ್ರೀಯ ಆಟಗಾರರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
4 ಸಾವಿರ ಮಂದಿಗೆ ಕುಳಿತು ಕೊಳ್ಳಬಹುದಾದ ಗ್ಯಾಲರಿ ನಿರ್ಮಾಣ ಮಾಡಲಾಗುವುದು. ಇಂಡೋರ್ ಸ್ಟೇಡಿಯಂ ಮಾದರಿಯಲ್ಲಿ ಕ್ರೀಡಾಂಗಣವನ್ನು ಸಜ್ಜುಗೊಳಿಸಲಾಗುವುದು. ಎಲ್.ಇ.ಡಿ ಪರದೆಗಳನ್ನು ಅಳವಡಿಸಲಾಗುವುದು. ಆತ್ಯಾಧುನಿಕ ಲೈಟಿಂಗ್ಸ್ ಮತ್ತು ಅಲಂಕಾರವನ್ನು ಒಳಗೊಂಡ ಆಕರ್ಷಕ ವೇದಿಕೆಯನ್ನು ನಿರ್ಮಾಣ ಮಾಡಲಾಗುವುದು.
ಇದರ ಕಾಮಗಾರಿಗೆ ಇಂದು ಚಪ್ಪರ ಮುಹೂರ್ತ ನೆರವೇರಿಸಲಾಗಿದೆ.
ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 1 ಲಕ್ಷ ಮತ್ತು ಟ್ರೋಫಿ, ದ್ವಿತೀಯ ಬಹುಮಾನ 65,000 ಮತ್ತು ಟ್ರೋಫಿ, ತೃತೀಯ ಬಹುಮಾನ 35,000 ಮತ್ತು ಟ್ರೋಫಿ, ಚತುರ್ಥ ಬಹುಮಾನ 35,000 ಮತ್ತು ಟ್ರೋಫಿ ನೀಡಲಾಗುವುದು. ಎಂದು ವಿವರ ನೀಡಿದರು.
ಪಂದ್ಯಾಟ ಸಹಾಯಾರ್ಥ ಲಕ್ಕಿಡಿಪ್ ಕೂಪನ್ ಆಯೋಜಿಸಲಾಗಿದೆ ಎಂದು ಸಂಘಟನಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.