ಸುಳ್ಯ: ಕರ್ನಾಟಕ ರಾಜ್ಯ ಲಗೋರಿ ಅಸೋಸಿಯೇಷನ್, ದ.ಕ.ಜಿಲ್ಲಾ ಲಗೋರಿ ಅಸೋಸಿಯೇಷನ್ ಹಾಗೂ ರಾಷ್ಟ್ರೀಯ ಲಗೋರಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ 2024 ಫೆಬ್ರವರಿ 10 ಮತ್ತು 11 ರಂದು ಸುಳ್ಯದಲ್ಲಿ ನಡೆಯುವ ರಾಷ್ಟ್ರೀಯ ಲಗೋರಿ ಪಂದ್ಯಾಟದ ಸ್ವಾಗತ ಸಮಿತಿ, ಸಂಘಟನಾ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳ ಸಭೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಪಂದ್ಯಾಟದ ಯಶಸ್ವಿಗೆ ರಚಿಸಲಾದ ವಿವಿಧ ಸಮಿತಿಗಳ ಪದಾಧಿಕಾರಿಗಳನ್ನು ಸಭೆಯಲ್ಲಿ ಘೋಷಣೆ ಮಾಡಲಾಯಿತು. ಪಂದ್ಯಾವಳಿಗೆ ತಗುಲುವ ಅಂದಾಜು ವೆಚ್ಚದ
ಪಟ್ಟಿ ತಯಾರಿಸಿ ಆರ್ಥಿಕ ಕ್ರೂಢೀಕರಣದ ಬಗ್ಗೆ ಚರ್ಚೆ ನಡೆಸಲಾಯಿತು. ಹಗಲಿನ ವೇಳೆ ಪಂದ್ಯಗಳನ್ನು ಮಹಾತ್ಮಾಗಾಂಧಿ ಮಲ್ನಾಡ್ ಶಾಲಾ ಕ್ರೀಡಾಂಗಣದಲ್ಲಿ ಹಾಗೂ ರಾತ್ರಿ ಹೊನಲು ಬೆಳಕಿನ ಪಂದ್ಯಗಳನ್ನು ಯುವಜನ ಸಂಯುಕ್ತ ಮಂಡಳಿ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಪಂದ್ಯಗಳ ಮಧ್ಯೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ನಿರ್ಧರಿಸಲಾಯಿತು. ರಾಷ್ಟ್ರೀಯ ಮಟ್ಟದ ಲಗೋರಿ ಪಂದ್ಯಾಕೂಟದ ಬಗ್ಗೆ ಸಂಸದರು, ಶಾಸಕರನನ್ನು ಸೇರಿಸಿ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಯಿತು.

ರಾಷ್ಟ್ರೀಯ ಲಗೋರಿ ಪಂದ್ಯಾಟದ ಸಂಘಟನಾ ಸಮಿತಿಯ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು ಸ್ವಾಗತಿಸಿ, ಪಂದ್ಯಾಕೂಟದ ರೂಪುರೇಷೆಗಳ ಬಗ್ಗೆ ವಿವರಿಸಿದರು. ವಿವಿಧ ಸಮಿತಿಗಳ ಪದಾಧಿಕಾರಿಗಳನ್ನು ಅವರು ಘೋಷಣೆ ಮಾಡಿದರು.
ಸಂಘಟನಾ ಸಮಿತಿಯ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಮಾತನಾಡಿ ‘ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟವನ್ನು ಸಂಘಟಿಸುವ ಮೂಲಕ ಲಗೋರಿಯನ್ನು ಶಾಲಾ ಶಿಕ್ಷಣದಲ್ಲಿ ಸೇರ್ಪಡೆ ಮಾಡುವ ದೊಡ್ಡ ಉದ್ದೇಶ ಇದೆ. ಆದುದರಿಂದ ಈ ಕಾರ್ಯಕ್ರಮ ಯಶಸ್ವಿಯಾಗಬೇಕಾಗಿದೆ. ಮುಂದೊಂದು ದಿನ ಸುಳ್ಯದಿಂದ ಲಗೋರಿ ಒಲಿಂಪಿಕ್ಸ್ಗೆ ಸೇರ್ಪಡೆಯಾಗುವ ದೊಡ್ಡ ಕನಸು ನಮ್ಮ ಮುಂದಿದೆ ಎಂದರು.
ಸ್ವಾಗತ ಸಮಿತಿಯ ಅಧ್ಯಕ್ಷ ಎಸ್.ಎನ್.ಮನ್ಮಥ ಮಾತನಾಡಿ’ ಲಗೋರಿ ಸುಳ್ಯದ ಕ್ರೀಡೆ. ಆದುದರಿಂದ ರಾಷ್ಟ್ರೀಯ ಲಗೋರಿ ಪಂದ್ಯಾಟಕ್ಕೆ ಸುಳ್ಯದ ಎಲ್ಲರನ್ನೂ ಸೇರಿಸಲಾಗುವುದು. ಎಲ್ಲರ ಸಹಾಯ, ಸಹಕಾರ ಬೇಕು ಎಂದು ಹೇಳಿದರು.
ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಸಂಘಟನಾ ಸಮಿತಿಯ ಗೌರವಾಧ್ಯಕ್ಷ ಎನ್.ಎ.ರಾಮಚಂದ್ರ ಮಾತನಾಡಿದರು.
ಸಂಘಟನಾ ಸಮಿತಿಯ ಕಾರ್ಯಾಧ್ಯಕ್ಷ ಬಿ.ಕೆ.ಮಾಧವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿವರಾಮ ಏನೆಕಲ್ಲು ವಂದಿಸಿದರು. ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

ಸಭೆಯಲ್ಲಿ ಪ್ರಮುಖರಾದ ಕೆ.ಗೋಕುಲ್ದಾಸ್, ಎ.ವಿ.ತೀರ್ಥರಾಮ,ಹರೀಶ್ ಕಂಜಿಪಿಲಿ, ಪಿ.ಬಿ.ಸುಧಾಕರ ರೈ, ಕೆ.ಬಿ.ಇಬ್ರಾಹಿಂ ಗಾಂಧಿನಗರ, ವೀರಪ್ಪ ಗೌಡ ಕಣ್ಕಲ್, ಪಿ.ಎಸ್.ಗಂಗಾಧರ, ಡಾ.ಎನ್.ಎ.ಜ್ಞಾನೇಶ್, ವಿನಯಕುಮಾರ್ ಕಂದಡ್ಕ, ಸುಬೋದ್ ಶೆಟ್ಟಿ ಮೇನಾಲ, ಜಯರಾಮ ಹಾಡಿಕಲ್ಲು, ಹರಿಪ್ರಕಾಶ್ ಅಡ್ಕಾರ್, ಶರತ್ ಅಡ್ಕಾರ್,ಹರೀಶ್ ಉಬರಡ್ಕ, ಗಿರೀಶ್ ನಾರ್ಕೋಡು, ದಿನೇಶ್ ಅಂಬೆಕಲ್ಲು, ಗುರುದತ್ ನಾಯಕ್, ಮನುದೇವ್ ಪರಮಲೆ, ಶಶಿಧರ ಎಂ.ಜೆ, ಭವಾನಿಶಂಕರ ಕಲ್ಮಡ್ಕ, ಪ್ರವೀಣ್ ಕುಮಾರ್ ಜಯನಗರ, ನಂದರಾಜ್ ಸಂಕೇಶ್, ಕೊರಗಪ್ಪ ಬೆಳ್ಳಾರೆ, ಹೇಮಂತ್ ಕಾಮತ್, ದೀಪಕ್ ಕುತ್ತಮೊಟ್ಟೆ, ದಿಲೀಪ್ ಬಾಬ್ಲುಬೆಟ್ಟು, ಜಯರಾಮ ದೇರಪ್ಪಜ್ಜನಮನೆ, ಜಿ.ಎ.ಮಹಮ್ಮದ್, ಶೈಲೇಶ್ ಅಂಬೆಕಲ್ಲು, ಉಮೇಶ್, ಸಾತ್ವಿಕ್ ಏನೆಕಲ್ಲು ಮತ್ತಿತರರು ಉಪಸ್ಥಿತರಿದ್ದರು.









