ಮಂಡ್ಯ:ಪ್ರಾಚೀನ ಕಲೆಗಳಲ್ಲಿ ಶಾಸ್ತೀಯ ನೃತ್ಯ ಮತ್ತು ಶಾಸ್ತೀಯ ಸಂಗೀತ ದೇಶದ ಸಂಪತ್ತಾಗಿವೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ವಿದುಷಿ ಶುಭಾಧನಂಜಯ್ ಹೇಳಿದರು. ನಗರದಲ್ಲಿರುವ ಪಿಇಎಸ್ ಸ್ವಾಮಿ ರಂಗಮಂದಿರದಲ್ಲಿ ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಆಯೋಜಿಸಿದ್ದ 3 ದಿನಗಳ ಗುರುದೇವೋತ್ಸವ -೨೦೨೪ ಮತ್ತು
ಶಾಸ್ತೀಯ ನೃತ್ಯಗಳ ರಾಷ್ಟೀಯ ಹಬ್ಬ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಗುರುದೇವ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಮಂಡ್ಯ ಮೈಸೂರು ನೆಲದಲ್ಲಿ ವಿಧುಷಿ ಚೇತನಾ ಮತ್ತು ರಾಧಾಕೃಷ್ಣ ಅವರ ಶ್ರಮದಿಂದ ಶಾಸ್ತೀಯ ಸಂಗೀತ ಮತ್ತು ನೃತ್ಯ ಕಲಾವಿದರು ಬೆಳೆಯುತ್ತಿದ್ದಾರೆ, ರಾಷ್ಟ್ರ-ಅಂತರಾಷ್ಟೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಸಮಿತಿ ಸಭಾಧ್ಯಕ್ಷೆ ಡಾ.ಮೀರಾಶಿವಲಿಂಗಯ್ಯ ಮಾತನಾಡಿದರು.
ಮೂರು ದಿನದ ಕಾರ್ಯಕ್ರಮದಲ್ಲಿ ಭರತನಾಟ್ಯ, ಶಾಸ್ತೀಯ ಸಂಗೀತ ನೃತ್ಯ ಕ್ಷೇತ್ರದ ಬಗ್ಗೆ ಪ್ರಬಂಧ ಮಂಡನೆ, ವಿಚಾರಗೋಷ್ಟಿಗಳು, ವಿವಿಧ ಜಿಲ್ಲೆ, ರಾಜ್ಯಗಳಿಂದ ಆಗಮಿಸಿದ ನೃತ್ಯ ಅಭ್ಯರ್ಥಿಗಳಿಂದ ಉತ್ತಮ ನೃತ್ಯ ಪ್ರದರ್ಶನ ನೃತ್ಯ ರೂಪಕಗಳು ನಡೆದು ಜನಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ಗೌಡ, ಪಿಇಟಿ ಅಧ್ಯಕ್ಷ ವಿಜಯಾನಂದ, ಮನೋವೈದ್ಯ ಡಾ.ಟಿ.ಎಸ್.ಸತ್ಯನಾರಾಯಣರಾವ್, ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಚಂದ್ರನಾಯಕ, ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಕಾರ್ಯದರ್ಶಿ ವಿಧುಷಿ ಡಾ. ಚೇತನಾ ರಾಧಾಕೃಷ್ಣ, ವ್ಯವಸ್ಥಾಪಕ ರಾಧಾಕೃಷ್ಣ ಮತ್ತಿತರರಿದ್ದರು.